Mangaluru: ನವ ಮಂಗಳೂರು ಬಂದರಿಗೆ ಬಂದ ಕಚ್ಚಾತೈಲ ನೌಕೆ

West asia war oil ship reached Mangaluru port

ಮಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆ ಮುಂದುವರಿದಿದ್ದು, ನವ ಮಂಗಳೂರು (Mangaluru) ಬಂದರಿಗೆ ನಾಲ್ಕನೇ ಕಚ್ಚಾತೈಲ ಹೊತ್ತ ಸರಕು ನೌಕೆಯು ನಿನ್ನೆ ರಾತ್ರಿ ಆಗಮಿಸಿದೆ.

ಬಂದರಿನಲ್ಲಿ ಸೂಕ್ತ ಭದ್ರತೆ

 ಸಂಘರ್ಷದ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ನೌಕೆಯಿಂದ ತೈಲವನ್ನು ಹೊರತೆಗೆಯುವ ಕಾರ್ಯ ಯಶಸ್ವಿಯಾಗಿ ಆರಂಭಗೊಂಡಿದೆ.  ಸೌದಿ ಅರೇಬಿಯಾದಿಂದ ನವ ಮಂಗಳೂರಿಗೆ ಆಗಮಿಸಿರುವ ಈ ಬೃಹತ್ ಹಡಗು 1.41 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಹೊತ್ತು ತಂದಿದೆ.

ಮಂಗಳೂರು ಬಂದರಿಗೆ ಬಂದ ತೈಲ

 ಇತ್ತೀಚಿನ ದಿನಗಳಲ್ಲಿ ಮಂಗಳೂರು ಬಂದರಿಗೆ ತೈಲ ನೌಕೆಗಳ ಆಗಮನ ಹೆಚ್ಚಾಗಿದ್ದು, ಮಾರ್ಚ್ 25 ರಂದು ರಷ್ಯಾದಿಂದ ಆಗಮಿಸಿದ್ದ ‘ಅಕ್ವಾ ಟೈಟಾನ್’ ಹೆಸರಿನ ಹಡಗಿನಿಂದ ಎಂಆರ್‌ಪಿಎಲ್ (MRPL) ತೈಲ ಸಂಸ್ಕರಣಾ ಘಟಕಕ್ಕೆ 96 ಸಾವಿರ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಪೂರೈಸಲಾಗಿತ್ತು. ಅದೇ ರೀತಿ ಅಮೆರಿಕದ ಟೆಕ್ಸಾಸ್‌ನಿಂದ ಆಗಮಿಸಿದ ‘ಪಿಕ್ಸಿಸ್ ಪಯೋನೀರ್’ ಹೆಸರಿನ ಎಲ್‌ಪಿಜಿ ಕಾರ್ಗೋ ಹಡಗು 16 ಸಾವಿರದ 714 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (LPG) ಹೊತ್ತು ಬಂದಿದ್ದು, ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಈ ಸರಕು ನೌಕೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ, ಆಸ್ತಿಪಾಸ್ತಿಗೆ ಹಾನಿ

Leave a Reply

Your email address will not be published. Required fields are marked *