TOP NEWS
Another Prison Scandal After Parappana Agrahara Police Uncover Illegal Mobile Use in Mangaluru Central Prison

Mangaluru: ಮಂಗಳೂರು ಜೈಲಿನಲ್ಲಿ ರಾಜಾತಿಥ್ಯ ಬಯಲು: ಬರ್ಕೆ ಪೊಲೀಸರ ದಿಢೀರ್ ದಾಳಿ ವೇಳೆ 9 ಕೈದಿಗಳಿಂದ 10 ಮೊಬೈಲ್ ವಶ

ಮಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ನಡೆಯುತ್ತಿರುವ ಭದ್ರತಾ ಲೋಪಗಳು ಹಾಗೂ ಕಾರಾಗೃಹದ ಒಳಗಿನ ಕೈದಿಗಳಿಗೆ ದೊರೆಯುತ್ತಿರುವ ಐಷಾರಾಮಿ ವ್ಯವಸ್ಥೆಗಳ ಕುರಿತು ದಿನಕ್ಕೊಂದು ಹೊಸ ವಿವಾದಗಳು ಮುನ್ನೆಲೆಗೆ ಬರುತ್ತಿದ್ದರೂ ಸಹ, ಸರ್ಕಾರದ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ಮೀರಿ ಜೈಲುಗಳಲ್ಲಿ(Mangaluru) ರಾಜಾತಿಥ್ಯ ಮಾತ್ರ ಇನ್ನೂ ನಿಂತಿಲ್ಲ ಎಂಬುದಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರಬಿದ್ದಿದೆ. ಬೆಂಗಳೂರಿನ ಕುಖ್ಯಾತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್‌ಗಳು ಸಿಕ್ಕಿಹಾಕಿಕೊಂಡ ಬಿಸಿ ಆರೋಗುವ ಮುನ್ನವೇ, ಕರಾವಳಿಯ ಪ್ರಮುಖ…

Read More
Crime Jail Smuggling Bid Foiled Accused Trapped by Alert Cops in Mangaluru

Crime: ಜೈಲು ಹಕ್ಕಿಗೆ ಸಿಮ್ ಸಪ್ಲೈ ಮಾಡಲು ಸ್ಕೆಚ್: ಪೊಲೀಸರ ಅಲರ್ಟ್‌ ಕಾರ್ಯಾಚರಣೆಗೆ ಪ್ಲಾನ್ ಫ್ಲಾಪ್!

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಬಳಿ ವಿಚಾರಣಾಧೀನ ಕೈದಿಯೊಬ್ಬನಿಗೆ ರಹಸ್ಯವಾಗಿ ಸಿಮ್ ಕಾರ್ಡ್‌ಗಳನ್ನು ತಲುಪಿಸಲು ಹೋದ ಮತ್ತೊಬ್ಬ (Crime) ಆರೋಪಿಯ ಜಾಲವನ್ನು ಪೊಲೀಸರು ಸಮಯಪ್ರಜ್ಞೆಯಿಂದ ಭೇದಿಸಿದ್ದಾರೆ. ಈ ಸಂಬಂಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಘಟನೆಯ ಹಿನ್ನೆಲೆ ಜುಲೈ 23ರಂದು ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಯತೀಶ್ ಎ. ಹಾಗೂ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಕೊಣಾಜೆಯ ವಿವಿಧ ಗಂಭೀರ ಅಪರಾಧ ಪ್ರಕರಣಗಳ ವಿಚಾರಣೆ ಮುಗಿಸಿ, ಆರೋಪಿಗಳನ್ನು ಮರಳಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು…

Read More
Bollywood actor Shah Rukh Khan came to mangaluru

Shah Rukh Khan: 5 ದಶಕಗಳ ಬಳಿಕ ಕರಾವಳಿಗೆ ಕಿಂಗ್ ಖಾನ್ ಎಂಟ್ರಿ: ಮಂಗಳೂರಿಗೆ ಬಂದಿಳಿದ ಶಾರುಖ್!

ಮಂಗಳೂರು: ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅವರು ಇಂದು ಕರಾವಳಿ ನಗರಿ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ಹಮ್ಮಿಕೊಂಡಿರುವ “ಆನ್ ಇವನಿಂಗ್ ವಿತ್ ಶಾರುಖ್ ಖಾನ್” ಎಂಬ ವಿಶೇಷ ಸಾಂಸ್ಕೃತಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಅವರು ಆಗಮಿಸಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಭವ್ಯ ಸ್ವಾಗತ ದೊರೆತಿದೆ. ತಮ್ಮ ನೆಚ್ಚಿನ ನಟನನ್ನು ಕಣ್ಣಾರೆ ವೀಕ್ಷಿಸಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ…

Read More
aladangad kallurti deity temple which helped darshan in his crisis

Temple: ದರ್ಶನ್ ಸಂಕಷ್ಟಗಳ ಕಾಲದ ಆಸರೆ ಅಳದಂಗಡಿ ಕಲ್ಲುರ್ಟಿ ದೈವ: ಈ ಬಾರಿ ದೈವದ ಸನ್ನಿಧಿಗೆ ಬಾರದ ಕುಟುಂಬ

ಮಂಗಳೂರು: ಚಿತ್ರರಂಗದ ಸೂಪರ್ ಸ್ಟಾರ್ ಆಗಿರಲಿ ಅಥವಾ ರಾಜಕೀಯದ ಘಟಾನುಘಟಿ ನಾಯಕರೇ ಇರಲಿ, ವೈಯಕ್ತಿಕ ಜೀವನದಲ್ಲಿ ತೀವ್ರ ಸಂಕಷ್ಟ ಎದುರಾದಾಗ ದೈವ-ದೇವರ ಮೊರೆ ಹೋಗುವುದು ಕರಾವಳಿಯ ಆಚರಣೆಗಳಲ್ಲಿ ಪ್ರಮುಖವಾದದ್ದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ದಿವಂಗತ ಸುಷ್ಮಾ ಸ್ವರಾಜ್ ಅವರಂತಹ ಪ್ರಮುಖ ನಾಯಕರು ನಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ‘ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ’ (Temple) ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಅವರ ಜೀವನದ…

Read More
cooker bomb blast case 10 years jail for accused but victim is unhappy

Cooker Bomb Case: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ; ಶಿಕ್ಷೆ ಸಾಕಾಗದು ಎಂದ ಸಂತ್ರಸ್ತ ಆಟೋ ಚಾಲಕ

ಮಂಗಳೂರು: 2022ರ ನವೆಂಬರ್ 19ರಂದು ನಡೆದಿದ್ದ ಬಹುಚರ್ಚಿತ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ (Cooker Bomb Case) ಪ್ರಕರಣದ ಅಪರಾಧಿ ಮೊಹಮ್ಮದ್ ಶಾರಿಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿದೆ. ಈ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸ್ಫೋಟದ ಸಂತ್ರಸ್ತ ಆಟೋ ಚಾಲಕ ಪುರುಷೋತ್ತಮ ಪೂಜಾರಿ, ಈ ಶಿಕ್ಷೆಯ ಪ್ರಮಾಣ ತೃಪ್ತಿದಾಯಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವಾವಾಧಿ ಶಿಕ್ಷೆ ಆಗಬೇಕಿತ್ತು ಅಪರಾಧಿಗೆ ಶಿಕ್ಷೆಯಾಗಿರುವುದು ಒಳ್ಳೆಯದೇ ಆದರೂ, ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಲು…

Read More
West asia war oil ship reached Mangaluru port

Mangaluru: ನವ ಮಂಗಳೂರು ಬಂದರಿಗೆ ಬಂದ ಕಚ್ಚಾತೈಲ ನೌಕೆ

ಮಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದ ಇಂಧನ ಭದ್ರತೆ ಮುಂದುವರಿದಿದ್ದು, ನವ ಮಂಗಳೂರು (Mangaluru) ಬಂದರಿಗೆ ನಾಲ್ಕನೇ ಕಚ್ಚಾತೈಲ ಹೊತ್ತ ಸರಕು ನೌಕೆಯು ನಿನ್ನೆ ರಾತ್ರಿ ಆಗಮಿಸಿದೆ. ಬಂದರಿನಲ್ಲಿ ಸೂಕ್ತ ಭದ್ರತೆ  ಸಂಘರ್ಷದ ಹಿನ್ನೆಲೆಯಲ್ಲಿ ಬಂದರಿನಲ್ಲಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇಂದು ಬೆಳಿಗ್ಗೆಯಿಂದಲೇ ನೌಕೆಯಿಂದ ತೈಲವನ್ನು ಹೊರತೆಗೆಯುವ ಕಾರ್ಯ ಯಶಸ್ವಿಯಾಗಿ ಆರಂಭಗೊಂಡಿದೆ.  ಸೌದಿ ಅರೇಬಿಯಾದಿಂದ ನವ ಮಂಗಳೂರಿಗೆ ಆಗಮಿಸಿರುವ ಈ ಬೃಹತ್ ಹಡಗು 1.41 ಲಕ್ಷ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಹೊತ್ತು ತಂದಿದೆ. ಮಂಗಳೂರು…

Read More
Cyber crime Matrimony Scam belagavi lady lost lakhs

Cyber Crime: ನೂರಾರು ಕೋಟಿ ವಂಚಿಸಿದ್ದ ಆರೋಪಿಗಳು ಅಂದರ್‌, ಮಂಗಳೂರು ಪೊಲೀಸರಿಂದ ಕಾರ್ಯಾಚರಣೆ

ದಕ್ಷಿಣ ಕನ್ನಡ:  ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದ 11 ಮಂದಿಯ ತಂಡವನ್ನು ಮಂಗಳೂರು ನಗರ ಸೆನ್ ಕ್ರೈಂ (Cyber Crime) ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಕೆಲ ಆರೋಪಿಗಳು ವಂಚಕರ ತಂಡದಲ್ಲಿ 16 ಭಾರತೀಯರು ಹಾಗೂ ಚೈನಾದ ಈ ಪ್ರಕರಣದಲ್ಲಿ ಐವರು ಭಾರತೀಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಇದನ್ನೂ ಓದಿ: ವಸಂತ್‌ ನಾಯ್ಕ್‌ ಕೊಲೆ…

Read More