Trigrahi Yoga: ಸೂರ್ಯ-ಶನಿ, ಶುಕ್ರ ಸಂಯೋಗ, ಅಷ್ಟೈಶ್ವರ್ಯ ಸಿಗುತ್ತೆ

Trigrahi Yoga sun shani and venus conjunction Trigrahi Yoga sun shani and venus conjunction

ಮಾರ್ಚ್‌ ತಿಂಗಳಿನಲ್ಲಿ ಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಒಂದೊಂದು ಗ್ರಹಗಳು ಒಂದೊಂದು ರಾಶಿಗೆ ಸಂಚಾರ ಮಾಡುತ್ತದೆ. ಈ ಸಂಚಾರದ ಪರಿಣಾಮದಿಂದ ಗ್ರಹಗಳ ಸಂಯೋಗ ಸಹ ಆಗುತ್ತದೆ. ಈ ಗ್ರಹಗಳ ಸಂಯೋಗದಿಂದ ವಿಶೇಷ ಯೋಗಗಳು ಸಹ ಸೃಷ್ಟಿ ಆಗುತ್ತದೆ. ಈ ಬಾರಿ ಸೂರ್ಯ, ಶನಿ ಹಾಗೂ ಶುಕ್ರನ ಸಂಯೋಗದ ಕಾರಣದಿಂದ ತ್ರಿಗ್ರಾಹಿ ಯೋಗ (Trigrahi Yoga) ಉಂಟಾಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಲಾಭವಾಗುತ್ತದೆ.

ವೃಷಭ ರಾಶಿ: ತ್ರಿಗ್ರಾಹಿ ಯೋಗ ಈ ರಾಶಿಯ ಜನರಿಗೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕ ಹಣ ಹಾಗೂ ಮಾತಿನ ಮನೆಯಲ್ಲಿ ರೂಪುಗೊಳ್ಳುತ್ತಿದೆ. ಹಾಗಾಗಿ ಈ ಸಮಯದಲ್ಲಿ ನಿಮ್ಮ ಆದಾಯ ಡಬಲ್ ಆಗುತ್ತದೆ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಹ ಸಿಗುತ್ತದೆ.

ಸಿಂಹ ರಾಶಿ: ನಿಮ್ಮ ರಾಶಿಯ ಆದಾಯ ಮತ್ತು ಸಂಪತ್ತಿನ ಮನೆಯಲ್ಲಿ ಈ ಯೋಗ ಉಂಟಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಯಾವುದೇ ಹೂಡಿಕೆ ಮಾಡಿದರೂ ಅದರಿಂದ ನಿಮಗೆ ಲಾಭ ಸಿಗುತ್ತದೆ. ಅಲ್ಲದೇ, ನಿಮ್ಮ ವೃತ್ತಿಜೀವನದಲ್ಲಿ ನೀವು ಹೊಸ ಯಶಸ್ಸನ್ನು ಸಾಧಿಸುವಿರಿ. ಕುಟುಂಬದಲ್ಲಿ ಸಂತೋಷವನ್ನ ಹೆಚ್ಚು ಮಾಡುತ್ತದೆ. ಇದರ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಸಹ ಲಾಭ ಪಡೆಯಬಹುದು.

ತುಲಾ ರಾಶಿ: ಈ ರಾಶಿಯವರ ಜಾತಕದ ಕರ್ಮದ ಮನೆಯಲ್ಲಿ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ವೃತ್ತಿ ಮತ್ತು ವ್ಯಾಪಾರದ ದೃಷ್ಟಿಯಿಂದ ಈ ರಾಶಿಯವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಈ ಸಮಯದಲ್ಲಿ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಆರ್ಥಿಕ ಪ್ರಯತ್ನಗಳು ಕೂಡಿ ಬರುವುದು. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಉತ್ತೇಜನ ದೊರೆಯುತ್ತದೆ. ಟುಂಬದ ಸದಸ್ಯರ ಸಹಕಾರದಿಂದ ಪ್ರಮುಖ ವ್ಯವಹಾರಗಳು ತೃಪ್ತಿಕರವಾಗಿ ಪೂರ್ಣಗೊಳ್ಳಲಿವೆ. ಅನಾರೋಗ್ಯದಿಂದ ಸ್ವಲ್ಪ ಪರಿಹಾರ ಸಿಗುತ್ತದೆ.

ಧನಸ್ಸು ರಾಶಿ: ಕೆಲಸದಲ್ಲಿ ನಿಮ್ಮ ಪ್ರತಿಭೆಗೆ ಮನ್ನಣೆ ಸಿಗಲಿದೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.  ಉದ್ಯೋಗದಲ್ಲಿ ಉತ್ತಮ ಹೊಂದಾಣಿಕೆ ಇರುತ್ತದೆ. ವೃತ್ತಿಪರ ಜೀವನವು ಉತ್ತೇಜಕ ಮತ್ತು ಭರವಸೆ ನೀಡುತ್ತದೆ. ರಿಯಲ್ ಎಸ್ಟೇಟ್ ವಿವಾದಗಳನ್ನು ಸಮಯೋಚಿತವಾಗಿ ಪರಿಹರಿಸಿದರೆ ನಿಮಗೆ ಸಹಾಯವಾಗುತ್ತದೆ. ಕುಟುಂಬ ಜೀವನವು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರುತ್ತದೆ.

ಮೀನ ರಾಶಿ: ಪ್ರಮುಖ ವ್ಯವಹಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿರೀಕ್ಷಿತ ರೀತಿಯಲ್ಲಿ ಯಶಸ್ವಿಯಾಗುತ್ತವೆ. ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆ ಕೇಳಿಬರುತ್ತದೆ.

ಇದನ್ನೂ ಓದಿ: ಬುಧ-ಶನಿ ಸಂಯೋಗ, ಈ ರಾಶಿಯವರಿಗೆ ರಾಜಯೋಗ

Leave a Reply

Your email address will not be published. Required fields are marked *