ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ (Lakkundi) ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವನ್ನು ಇಂದು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೇಂದ್ರದ ನೆರವಿನ ಭರವಸೆ ನೀಡಿದ ಸಂಸದರು
ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಚಾಲುಕ್ಯರು ಮತ್ತು ವಿಜಯನಗರ ಅರಸರು ತಮ್ಮ ಆಳ್ವಿಕೆಯ ಸಂದರ್ಭದಲ್ಲಿ ಲಕ್ಕುಂಡಿ ಪರಿಸರದಲ್ಲಿ ನೂರಾರು ದೇವಾಲಯಗಳನ್ನು ಮತ್ತು ಕಲ್ಯಾಣಿಗಳನ್ನು ನಿರ್ಮಿಸಿರುವುದು ಇತಿಹಾಸಗಳಿಂದ ತಿಳಿದು ಬರುತ್ತದೆ. ಭೂಮಿಯಲ್ಲಿ ಹುದಗಿರುವ ವಿಶ್ವ ಪ್ರಸಿದ್ಧ ಸ್ಮಾರಕಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಉತ್ಖನನ ಕಾರ್ಯಕ್ಕೆ ಕೇಂದ್ರದ ಸಹಕಾರ ಕುರಿತಂತೆ ಸಂಪೂರ್ಣವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಬಿಕೆ ಹರಿಪ್ರಸಾದ್‌ಗೆ ಟಾಂಗ್ ಕೊಟ್ಟ ಸುರೇಶ್ ಕುಮಾರ್, ಬೌದ್ಧಿಕ ದಿವಾಳಿತನ ಎಂದ ಶಾಸಕ
