Balochistan: ಪಾಕಿಸ್ತಾನಕ್ಕೆ ಶಾಕ್‌ ಕೊಟ್ಟ ಬಲೂಚಿಸ್ತಾನ, 200+ ಪಾಕಿಗಳು ಬಲಿ

How Balochistan Rebels Killed 200 Pakistan Personnel

ನವದೆಹಲಿ: ಬಲೂಚಿಸ್ತಾನದ (Balochistan) ಹಲವಾರು ಜಿಲ್ಲೆಗಳಲ್ಲಿ ನಿರಂತರ ದಾಳಿಯು 40 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದೆ ಎಂದು ಬಲೂಚಿಸ್ತಾನ್ ಬಂಡುಕೋರ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದೆ. ಇನ್ನು ಈ ದಾಳಿಗೆ ಆಪರೇಷನ್ ಹೆರೋಫ್ ಫೇಸ್ I ಎಂದು ಕರೆದಿದ್ದು, ಪಾಕಿಸ್ತಾನಕ್ಕೆ ಈ ಮೂಲಕ ದೊಡ್ಡ ಶಾಕ್‌ ಕೊಟ್ಟಿದೆ..

ಬಿಎಲ್‌ಎ ವಕ್ತಾರ ಜೀಯಾಂಡ್ ಬಲೋಚ್ ಬಿಡುಗಡೆ ಮಾಡಿದ ಎರಡು ಹೇಳಿಕೆಗಳಲ್ಲಿ, ಖರನ್, ಮಸ್ತುಂಗ್, ಟಂಪ್ ಮತ್ತು ಪಾಸ್ನಿ ಸೇರಿದಂತೆ ಪ್ರದೇಶಗಳಲ್ಲಿ ತನ್ನ ಕಾರ್ಯಕರ್ತರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿಕೊಂಡಿದೆ. ಪಾಕಿಸ್ತಾನದ ಮಿಲಿಟರಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದೂ ಸಹ ಅದು ಹೇಳಿಕೊಂಡಿದೆ.

200 ಪಾಕ್ ಸಿಬ್ಬಂದಿ ಹತ್ಯೆ

ಬಿಎಲ್‌ಎ ಹೇಳಿಕೆಯ ಪ್ರಕಾರ, ಪಾಕಿಸ್ತಾನ ಸೇನೆ, ಪೊಲೀಸ್ ಮತ್ತು ಫ್ರಾಂಟಿಯರ್ ಕಾರ್ಪ್ಸ್‌ನ 200 ಕ್ಕೂ ಹೆಚ್ಚು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 17 ಜನರನ್ನು ಸೆರೆಹಿಡಿಯಲಾಗಿದೆ. ಆದರೆ ಈ ಹೇಳಿಕೆ ವಿಚಾರವಾಗಿ ಇದುವರೆಗೂ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ, ದಾಳಿಯಲ್ಲಿ 17 ಕಾನೂನು ಜಾರಿ ಸಿಬ್ಬಂದಿ ಮತ್ತು 31 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರತ್ಯೇಕ ಬೆಳವಣಿಗೆಯಲ್ಲಿ, ನೋಶ್ಕಿಯ ಉಪ ಆಯುಕ್ತ ಮುಹಮ್ಮದ್ ಹುಸೇನ್ ಹಜಾರ ಮತ್ತು ಸಹಾಯಕ ಆಯುಕ್ತ ಮಾರಿಯಾ ಶಮೂ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿರುವುದಾಗಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.

ಇದನ್ನೂ ಓದಿ: ಜಿಮ್‌ ಸೋಗಿನಲ್ಲಿ ಮತಾಂತರ ಆರೋಪ, ಉತ್ತರಪ್ರದೇಶದಲ್ಲಿ ಆರೋಪಿಗಳ ಬಂಧನ

Leave a Reply

Your email address will not be published. Required fields are marked *