TOP NEWS
Legal Faceoff in Renukaswamy Case Prosecution Demands Re Cross Examination of Mother Darshan Counsel Opposes

Renukaswamy Case: ರೇಣುಕಾಸ್ವಾಮಿ ತಾಯಿ ಮರು ಪಾಟೀ ಸವಾಲಿಗೆ ಪ್ರಾಸಿಕ್ಯೂಷನ್ ಪಟ್ಟು

ಬೆಂಗಳೂರು: ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ನ್ಯಾಯಾಲಯದ ವಿಚಾರಣೆಯಲ್ಲಿ ದಿನಕ್ಕೊಂದು ಮಹತ್ವದ ತಿರುವುಗಳು ಸಿಗುತ್ತಿವೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮೃತನ ತಾಯಿ ರತ್ನಪ್ರಭಾ ಅವರನ್ನು ‘ಪ್ರತಿಕೂಲ ಸಾಕ್ಷಿ’ (ಹೊಸ್ಟೈಲ್ ವಿಟ್ನೆಸ್) ಎಂದು ಪರಿಗಣಿಸಿ, ಅವರನ್ನು ಮರು ಪಾಟೀಸವಾಲಿಗೆ ಒಳಪಡಿಸಲು ಅನುಮತಿ ಕೋರಿ ಪ್ರಾಸಿಕ್ಯೂಷನ್ ಬುಧವಾರ (ಆಗಸ್ಟ್ 12) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಷೆಡ್‌ನಿಂದ ಬಂದಿದ್ದ ಕರೆಗಳೇ ಹೈಲೈಟ್ ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್ ಅವರು ಕೋರ್ಟ್‌ನಲ್ಲಿ ಬಲವಾದ ವಾದ…

Read More
Breaking Karnataka Govt Shuffles IAS Officers Appoints New Officials to Key KPSC Posts

Breaking: ರಾಜ್ಯದಲ್ಲಿ ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ; ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಹುದ್ದೆಗಳಿಗೆ ಹೊಸ ನಿಯುಕ್ತಿ

ಬೆಂಗಳೂರು: ರಾಜ್ಯ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ, ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು (Breaking) ವರ್ಗಾವಣೆಗೊಳಿಸಿದೆ. ಇದರೊಂದಿಗೆ, ಕರ್ನಾಟಕ ಲೋಕಸೇವಾ ಆಯೋಗದ (KPSC) ಪ್ರಮುಖ ಹುದ್ದೆಗಳಿಗೂ ಹೊಸ ಅಧಿಕಾರಿಗಳನ್ನು ನೇಮಕ ಮಾಡಿ ಬುಧವಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ, ಸದ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಎಚ್. ಪ್ರಸನ್ನ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗಿದೆ. ಅವರನ್ನು ಕೆಪಿಎಸ್‌ಸಿಯ ಪರೀಕ್ಷಾ ನಿಯಂತ್ರಕರ (Controller of…

Read More
Warm Welcome for Former IPS Officer Annamalai During His Visit to Udupi Sri Krishna Matha

Annamalai: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಅಣ್ಣಾಮಲೈ: ಮಠದಲ್ಲಿ ಗೌರವ ಸತ್ಕಾರ

ಉಡುಪಿ: ತಮಿಳುನಾಡಿನ ಪ್ರಮುಖ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (Annamalai) ಅವರು ಬುಧವಾರ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ದೇವರ ದರ್ಶನ ಪಡೆದರು. ಮಠದ ಆಡಳಿತ ಮಂಡಳಿ ಹಾಗೂ ಅರ್ಚಕರು ಮಾಜಿ ಪೊಲೀಸ್ ಅಧಿಕಾರಿಯನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಮಠದ ಸಂಪ್ರದಾಯದಂತೆ ಕನಕನ ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಅಣ್ಣಾಮಲೈ ಅವರು ವಿಶೇಷ ಪೂಜೆ ಸಲ್ಲಿಸಿದರು. ದರ್ಶನದ ಬಳಿಕ ಶ್ರೀಮಠದ ತೀರ್ಥ ಪ್ರಸಾದ ಸ್ವೀಕರಿಸಿದ ಅವರಿಗೆ,…

Read More
Big news Karnataka Bans Production Sale of Tobacco and Nicotine Mixed Pan Masala

Big News: ರಾಜ್ಯಾದ್ಯಂತ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ಬ್ರೇಕ್

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಕರ್ನಾಟಕ ಸರ್ಕಾರ, ಬುಧವಾರದಂದು ಮಹತ್ವದ (Big News) ತೀರ್ಮಾನವೊಂದನ್ನು ಪ್ರಕಟಿಸಿದೆ. ತಂಬಾಕು ಹಾಗೂ ನಿಕೋಟಿನ್ ಅಂಶಗಳನ್ನು ಒಳಗೊಂಡಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ಬಳಕೆಯ ಮೇಲೆ ಮುಂದಿನ ಒಂದು ವರ್ಷದ ಅವಧಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ನಿಯಮದ ಪ್ರಕಾರ, ನಿಕೋಟಿನ್ ಮತ್ತು ತಂಬಾಕು ಮಿಶ್ರಿತ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ…

Read More
Good news for Bengaluru Pourakarmikas as GBA Greenlights Bonus After Three Years

GBA: ಪೌರಕಾರ್ಮಿಕರಿಗೆ ಜಿಬಿಎ ಸಿಹಿಸುದ್ದಿ: ಮೂರು ವರ್ಷಗಳ ಬಳಿಕ ಸಿಗಲಿದೆ ಬೋನಸ್ ಭಾಗ್ಯ!

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬೋನಸ್ ಸಿಗದೆ ಕಾಯುತ್ತಿದ್ದ ರಾಜಧಾನಿಯ ಪೌರಕಾರ್ಮಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಸಿಹಿಸುದ್ದಿ ನೀಡಿದೆ. ಜಿಬಿಎ ವ್ಯಾಪ್ತಿಯ ಒಟ್ಟು ಐದು ನಗರಪಾಲಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 14 ಸಾವಿರ ಕಾರ್ಮಿಕರಿಗೆ ಈ ಬಾರಿ ಬೋನಸ್ ವಿತರಿಸಲು ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯಡಿ ಸುಮಾರು 12,600 ಕಾಯಂ ನೌಕರರು ಹಾಗೂ 1,500 ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಸೌಲಭ್ಯ ಪಡೆಯಲಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 22 ಸಾವಿರ ರೂಪಾಯಿ ಬೋನಸ್…

Read More
Sandalwood 10 Years of Togetherness Radhika Pandit Shares Rare Engagement Video With Rocking Star Yash

Sandalwood: ಸ್ಯಾಂಡಲ್​​ವುಡ್ ಮಾದರಿ ಜೋಡಿ ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಹತ್ತು ವರ್ಷ: ಹಳೆಯ ನೆನಪು ಹಂಚಿಕೊಂಡ ನಟಿ

ಬೆಂಗಳೂರು: ಕನ್ನಡ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ಹಾಗೂ ಮಾದರಿ ದಂಪತಿ ಎನಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಬಾಳಲ್ಲಿ (Sandalwood) ಆಗಸ್ಟ್ 12 ಒಂದು ಮರೆಯಲಾಗದ ದಿನ. ಇವರಿಬ್ಬರ ನಿಶ್ಚಿತಾರ್ಥ ನಡೆದು ಇಂದಿಗೆ ಸರಿಯಾಗಿ ಹತ್ತು ವರ್ಷಗಳು ಪೂರೈಸಿದ್ದು, ಈ ವಿಶೇಷ ದಿನದ ಅಂಗವಾಗಿ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಂದಿನ ಅಪರೂಪದ ಸುಂದರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಜೀವಮಾನದ ಪ್ರೀತಿಯ ಜರ್ನಿ ತಮ್ಮ ನಿಶ್ಚಿತಾರ್ಥದ ದಿನಗಳನ್ನು…

Read More
Jail Term for Insulting National Song President Murmu Approves New Law Protecting Vande Mataram

Vande Mataram: ಇನ್ಮುಂದೆ ‘ವಂದೇ ಮಾತರಂ’ಗೆ ಅಡ್ಡಿಪಡಿಸಿದರೆ 3 ವರ್ಷ ಜೈಲು; ರಾಷ್ಟ್ರಪತಿ ಅಂಕಿತ!

ನವದೆಹಲಿ: ಭಾರತದ ರಾಷ್ಟ್ರೀಯ ಗೀತೆ ‘ಜನ ಗಣ ಮನ’ಕ್ಕೆ ಇರುವ ಕಾನೂನು ರಕ್ಷಣೆ ಮತ್ತು ಗೌರವ ಇನ್ನು ಮುಂದೆ ರಾಷ್ಟ್ರಗೀತೆ ‘ವಂದೇ ಮಾತರಂ’(Vande Mataram)ಗೂ ಸಿಗಲಿದೆ. ವಂದೇ ಮಾತರಂ ಗೀತೆಯನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಅಪಮಾನ ಮಾಡುವುದನ್ನು ಅಪರಾಧ ಎಂದು ಪರಿಗಣಿಸುವ ಮಹತ್ವದ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಅಧಿಕೃತ ಅಂಕಿತ ಹಾಕಿದ್ದಾರೆ. ಇದರೊಂದಿಗೆ ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ಕಾಯ್ದೆ-2026’ ದೇಶಾದ್ಯಂತ ಜಾರಿಗೆ ಬಂದಿದೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ….

Read More