ಬೆಂಗಳೂರು: ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ಸಾರಥ್ಯದ ಸರ್ಕಾರವು ಅಧಿಕಾರಕ್ಕೇರಿ ನೂರು ದಿನಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಹೆಗ್ಗುರುತಿನ ಸಂಭ್ರಮಾಚರಣೆಯನ್ನು ಸ್ಮರಣೀಯವಾಗಿಸಲು ‘ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಎಂಬ ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಐತಿಹಾಸಿಕ ವಿಧಾನಸೌಧದ ಬ್ಯಾಂಕ್ವೇಟ್ ಸಭಾಂಗಣದಲ್ಲಿ 2026ರ ಸೆಪ್ಟೆಂಬರ್ 10ರ ಗುರುವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಈ ಮಹತ್ವದ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಸರ್ಕಾರದ ನೂರು ದಿನಗಳ ಸಾಧನೆಗಳನ್ನು ಜನತೆಗೆ ಮುಟ್ಟಿಸಲು ಮತ್ತು ಮುಂದಿನ ಅಭಿವೃದ್ಧಿ ಹಾದಿಯ ರೂಪುರೇಷೆಗಳನ್ನು ಬಿಡುಗಡೆ ಮಾಡಲು ಈ ವೇದಿಕೆ ಸಾಕ್ಷಿಯಾಗಿತ್ತು.
3 ವರ್ಷಗಳ ಸಾಧನೆ ತೆರೆದಿಟ್ಟ ಸಿಎಂ
ಇನ್ನು ಈ ಕಾರ್ಯಕ್ರಮದಲ್ಲಿ ಮೂರು ವರ್ಷಗಳ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಯಾವೆಲ್ಲಾ ಜನಪರ ಕಾರ್ಯಗಳನ್ನ ಮಾಡಲಾಗಿದೆ ಎನ್ನುವ ಬಗ್ಗೆ ಸಹ ಸಿಎಂ ಮಾಹಿತಿ ನೀಡಿದ್ದಾರೆ.
ಐದು ಗ್ಯಾರಂಟಿಗಳ ಮೂಲಕ ಜನರ ಬೊಗಸೆಗೆ ನೇರವಾಗಿ ಒಟ್ಟು ₹1,45,416 ಕೋಟಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅದರಲ್ಲಿ ಯಾವ ಗ್ಯಾರಂಟಿಗೆ ಎಷ್ಟು ವೆಚ್ಚ ಆಗಿದೆ ಎಂಬುದನ್ನ ಕೂಡ ಸ್ಪಷ್ಟವಾಗಿ ತೆರೆದಿಟ್ಟಿದ್ದಾರೆ.
ಗೃಹಲಕ್ಷ್ಮಿ: ನಾಡಿನ 1.24 ಕೋಟಿ ಮಹಿಳೆಯರು ಪ್ರತಿ ತಿಂಗಳು ಸ್ವೀಕರಿಸಿದ ₹2,000 ರೂಪಾಯಿಗಳ ಒಟ್ಟು ಮೊತ್ತ ₹76,951 ಕೋಟಿಗಳಾಗಿದ್ದು, ಪ್ರತಿಯೊಬ್ಬ ಗೃಹಲಕ್ಷ್ಮಿಯೂ ಇಲ್ಲಿಯವರೆಗೆ ₹66,000 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.
ಗೃಹಜ್ಯೋತಿ: ಉಚಿತ ವಿದ್ಯುತ್ಗಾಗಿ ₹30,522 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, 41.67 ಕೋಟಿ ಮನೆಗಳಿಗೆ ಶೂನ್ಯ ವಿದ್ಯುತ್ ಬಿಲ್ ಮೂಲಕ ಬೆಳಕು ನೀಡಲಾಗಿದೆ.
ಅನ್ನಭಾಗ್ಯ: 4.44 ಕೋಟಿ ಜನರಿಗೆ ಅನ್ನದ ಭದ್ರತೆ ಒದಗಿಸಲಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ₹21,054 ಕೋಟಿ ವರ್ಗಾವಣೆ ಮಾಡಲಾಗಿದೆ.
ಶಕ್ತಿ ಯೋಜನೆ: ರಾಜ್ಯದ ಮಹಿಳೆಯರು ಉಚಿತವಾಗಿ ಕೈಗೊಂಡ 821 ಕೋಟಿ ಬಸ್ ಪ್ರಯಾಣಗಳಿಗೆ ಸರ್ಕಾರವು ₹15,735 ಕೋಟಿ ರೂಪಾಯಿಗಳನ್ನು ನೀಡಿದೆ.
ಯುವನಿಧಿ: 3.72 ಲಕ್ಷ ಯುವಜನತೆಯ ಬದುಕಿಗೆ ಸ್ವಾವಲಂಬನೆಯ ಬುನಾದಿ ಹಾಕಲಾಗಿದ್ದು, ಪದವೀಧರರ ಕೈಗೆ 1,154 ಕೋಟಿ ಕೊಡಲಾಗಿದೆ.
ಸರ್ಕಾರದ ಇತರ ಅತಿದೊಡ್ಡ ಯೋಜನೆಗಳು
ಡಿಬಿಟಿ ಮೂಲಕ 2.70 ಕೋಟಿ ಜನರಿಗೆ ₹1,41,210 ಕೋಟಿ ರೂಪಾಯಿ ನೇರವಾಗಿ ಹಣ ತಲುಪಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಗಳಿಗೆ (SCP/TSP) ಪ್ರಸಕ್ತ ವರ್ಷ ₹42,018 ಕೋಟಿ ಒದಗಿಸಲಾಗಿದೆ.
ಶೂನ್ಯ ಮತ್ತು ಕಡಿಮೆ ಬಡ್ಡಿದರದಲ್ಲಿ ಪ್ರಸಕ್ತ ವರ್ಷ 28.63 ಲಕ್ಷ ರೈತರಿಗೆ ₹25,652 ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ.
ನೀರಾವರಿ ಯೋಜನೆಗಳಿಗೆ ₹17,073 ಕೋಟಿ ಹಾಗೂ 121 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಕರ್ನಾಟಕವನ್ನು ಸಂಪರ್ಕಿಸುವ 4,275 ಕಿ.ಮೀ. ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ ಅನುದಾನವನ್ನು ₹5,000 ಕೋಟಿಗೆ ಅಂದರೆ ₹3,000 ಕೋಟಿಯಿಂದ ಹೆಚ್ಚಿಸಲಾಗಿದೆ
ಆರೋಗ್ಯ ಹಾಗೂ ಪೌಷ್ಟಿಕತೆ
ಗೃಹ ಆರೋಗ್ಯ ಯೋಜನೆಯಡಿ 88 ಲಕ್ಷ ಮಂದಿಗೆ ಮನೆಗಳಲ್ಲೇ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಹೃದಯ ಜ್ಯೋತಿ ಯೋಜನೆಯಡಿ 21,659 ಹೃದಯಾಘಾತ ಪ್ರಕರಣಗಳನ್ನು ಅನಾಹುತಕ್ಕೆ ಮುನ್ನವೇ ಪತ್ತೆಹಚ್ಚಲಾಗಿದೆ.
ಮಧ್ಯಾಹ್ನದ ಪೌಷ್ಟಿಕ ಆಹಾರ ಯೋಜನೆಯಡಿ ಪ್ರತಿ ಶಾಲಾ ಮಗುವಿಗೂ ವಾರದಲ್ಲಿ 6 ದಿನ ಮೊಟ್ಟೆ ನೀಡುವ ದೇಶದಲ್ಲೇ ಮೊದಲ ಹೆಜ್ಜೆಯನ್ನು ಇಡಲಾಗಿದೆ
ರಾಜ್ಯದ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಹೀಗಿದೆ
ಮೇ 2023 ರಿಂದ ಇಲ್ಲಿಯವರೆಗೆ ₹2.53 ಲಕ್ಷ ಕೋಟಿ ಹೂಡಿಕೆ ಗಳಿಸಲಾಗಿದ್ದು, ಎಫ್ಡಿಐ (FDI) ಆಕರ್ಷಣೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆಯಲಾಗಿದೆ.
6 ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಯಿದ್ದು, ಜಿಎಸ್ಡಿಪಿ (GSDP) ಬೆಳವಣಿಗೆ ದರ ಶೇ. 8.1 ರಷ್ಟಿದ್ದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ.
₹್4,33,326 ತಲಾ ಆದಾಯ ಇದ್ದು, ತಲಾ ಆದಾಯದಲ್ಲಿ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಹೊಂದಿದೆ.
100 ದಿನಗಳು: ಮೊದಲ ದಿನದಿಂದಲೇ ಮುನ್ನುಡಿ
ಪ್ರತಿ ವಿದ್ಯಾರ್ಥಿಗೂ ಉಚಿತ ಬಸ್ ಪಾಸ್.
10,000 ಭಾರತ್ ಜೋಡೋ ಯುವ ಸಂಘಗಳ ಘೋಷಣೆ.
2,400 ಚದರ ಅಡಿ ಮತ್ತು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಮನೆಗಳಿಗೆ ಒಸಿ (OC) ಮತ್ತು ಸಿಸಿ (CC), ಒಮ್ಮೆಗೇ ಕಟ್ಟಡ ಅನುಮೋದನೆ.
ಪ್ರತಿ ಅರ್ಹ ಆಸ್ತಿಗೂ ಬಿ-ಖಾತಾದಿಂದ (B-Khata) ಎ-ಖಾತಾಗೆ (A-Khata) ಪರಿವರ್ತನೆ.
ಖಾಲಿ ಇದ್ದ 72,000 ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ.
ಬೆಂಗಳೂರಿನ ರಸ್ತೆಗಳಿಗಾಗಿ ₹2,000 ಕೋಟಿ ಅನುದಾನ
ಭಯಮುಕ್ತ ಕರ್ನಾಟಕ ಹಾಗೂ ಒಕ್ಕೂಟ ವ್ಯವಸ್ಥೆ:
ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಶೇಷ ರೌಡಿ ನಿಗ್ರಹ ದಳಗಳ ಸ್ಥಾಪನೆ ಮಾಡಲಾಗಿದ್ದು, ರೌಡಿಸಂ ವಿಚಾರದಲ್ಲಿ ಶೂನ್ಯ ತಾಳ್ಮೆ ಘೋಷಿಸಲಾಗಿದೆ.
ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಗೇಟ್ಗಳನ್ನು ಬದಲಾಯಿಸಲಾಗಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಒಟ್ಟಾಗಿ ವೇದಿಕೆ ಹಂಚಿಕೊಳ್ಳುವ ಮೂಲಕ 12 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ನೀರಿನ ಆಸರೆಯನ್ನು ರಕ್ಷಿಸಲಾಗಿದೆ.
ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕರ್ನಾಟಕದ ಪರವಾಗಿ ಮಾತ್ರವಲ್ಲದೆ, ಭಾರತದ ಜಿಡಿಪಿಯ ಮೂರನೇ ಒಂದು ಭಾಗಕ್ಕೆ ಕೊಡುಗೆ ನೀಡುವ ದಕ್ಷಿಣ ಭಾರತದ ಪರವಾಗಿಯೂ ಧ್ವನಿ ಎತ್ತಿದರು. ನ್ಯಾಯಸಮ್ಮತ ತೆರಿಗೆ ಹಂಚಿಕೆ, ನೀರಿನ ಹಕ್ಕು ಮತ್ತು ನ್ಯಾಯ ಹಾಗೂ ದಕ್ಷಿಣ ಭಾರತದ ರಾಜಕೀಯ ಪ್ರಭಾವವನ್ನು ರಕ್ಷಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು
ಇದಲ್ಲದೇ, ಅವಕಾಶದೊಂದಿಗೆ ನ್ಯಾಯ ಎನ್ನುವ ನೀತಿಯಲ್ಲನ್ನ ರೂಪಿಸಲಾಗಿದ್ದು, ಯಾರೂ ಹಿಂದೆ ಉಳಿಯಬಾರದು. ಪ್ರತಿಯೊಂದು ಪ್ರದೇಶವೂ ಮುನ್ನಡೆಯಬೇಕು. ಕರ್ನಾಟಕಕ್ಕಾಗಿ ಒಂದೇ ದೃಷ್ಟಿಕೋನ ಇದೆ, ಇದು ಗ್ಯಾರಂಟಿಗಳ ಮೂಲಕ ದೊರೆತ ಭದ್ರತೆಯನ್ನು ಸಾಮಾಜಿಕ ಅವಕಾಶವಾಗಿ ಪರಿವರ್ತಿಸುವ ಪರ್ವ ಎಂದು ತಿಳಿಸಿದ್ದಾರೆ.
ನಾವು ಸರ್ವ ಸಹಭಾಗಿ ಆಡಳಿತ ನೀಡುತ್ತಿದ್ದು, ಗ್ರಾಮೀಣ ಕರ್ನಾಟಕದಲ್ಲಿ ನೆಲೆಸಿರುವ ಮನೆರಹಿತ ಪರಿಶಿಷ್ಟ ಜಾತಿ ಮತ್ತು ವರ್ಗದ ಕುಟುಂಬಗಳಿಗೆ ಉಚಿತ ಮನೆ ಮತ್ತು ನಿವೇಶನ ನೀಡಲಾಗುತ್ತಿದೆ. ಇದರ ಜೊತೆಗೆ ಗ್ರಾಮೀಣ ಕರ್ನಾಟಕದ ನಿವೇಶನ ರಹಿತ ಕುಟುಂಬಗಳಿಗೆ 5 ಲಕ್ಷ ನಿವೇಶನಗಳ ವಿತರಣೆ ಮಾಡಲಾಗಿದ್ದು, ಪ್ರತಿಯೊಂದು ಎಸ್ಸಿ ಮತ್ತು ಎಸ್ಟಿ ವಸತಿ ಪ್ರದೇಶಗಳನ್ನು ರಸ್ತೆಗಳು, ಚರಂಡಿಗಳು ಮತ್ತು ಬೀದಿ ದೀಪಗಳೊಂದಿಗೆ ಮೇಲ್ದರ್ಜೆಗೇರಿಸುವುದು ಹಾಗೆಯೇ, ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ 50,000 ಯುವಕರಿಗೆ ಸ್ವಯಂ ಉದ್ಯೋಗ ಮತ್ತು ಅಲ್ಪಸಂಖ್ಯಾತ ಸಮುದಾಯದ ಯುವ ಸಮೂಹದಲ್ಲಿ ಉದ್ಯಮಶೀಲತೆ ಮತ್ತು ಕೌಶಲ್ಯ ವೃದ್ಧಿಸಲು ಉನ್ನತ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಭವಿಷ್ಯದ ಗುರಿ (2037)
2037ರ ವೇಳೆಗೆ ನಮ್ಮ ಆರ್ಥಿಕತೆಯನ್ನು 0.343 ಟ್ರಿಲಿಯನ್ನಿಂದ 1 ಟ್ರಿಲಿಯನ್ಗೆ ಏರಿಸುವುದು.
ಶೂನ್ಯ ಬಡತನ, ಶೂನ್ಯ ಅಪೌಷ್ಟಿಕತೆ ಮತ್ತು ಶೂನ್ಯ ಶಾಲಾ ತೊರೆಯುವಿಕೆ ಗುರಿ ಹೊಂದಲಾಗಿದೆ.
ಬಲಿಷ್ಠ ಕರ್ನಾಟಕಕ್ಕಾಗಿ 9 ಸಂಕಲ್ಪಗಳಾದ ಆರೋಗ್ಯ, ಶಿಕ್ಷಣ, ಜಲ ಭವಿಷ್ಯ, ಹೂಡಿಕೆ ಮತ್ತು ಆರ್ಥಿಕ ಬಲ, ಪ್ರಾದೇಶಿಕ ಸಮತೋಲನ, ಹಸಿರು ಬೆಂಗಳೂರು, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ, ಹಾಗೂ ಉದ್ಯೋಗಗಳು ಮತ್ತು ಡಿಜಿಟಲ್ ಆಡಳಿತವನ್ನು ರೂಪಿಸಲಾಗಿದೆ
ರೈತರು ಹಾಗೂ ಕೃಷಿಗಾಗಿ ಮಾಡಿರುವ ಯೋಜನೆಗಳು
ಮುಖ್ಯಮಂತ್ರಿ ನೇಗಿಲ ಯೋಗಿ
ಗ್ರಾಮಾನುಭವ- ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ನೈಜ ಅನುಭವ
ತೇಗದ ಸಿರಿ
CM ರೈತ ಚೈತನ್ಯ, ಡಿಜಿಟಲ್ ಅಗ್ರಿ-ಟೆಕ್ ಮಿಷನ್
ಕೃಷಿ ರಫ್ತು ಮಿಷನ್ – KAPPEC ಪುನರ್ರಚನೆ
ಒಣಭೂಮಿ ಕೃಷಿ ನೀತಿ
ಕರ್ನಾಟಕ ಪ್ರೋಟೀನ್ ಮಿಷನ್
ಉದ್ಯೋಗ, ಕೈಗಾರಿಕೆ ಮತ್ತು ಯುವ ಸಬಲೀಕರಣಕ್ಕೆ ಒತ್ತು ನೀಡಲಿರುವ ಯೋಜನೆಗಳು
ಭಾರತ್ ಜೋಡೋ ಯುವ ಸಂಘ – 10,000 ಯುವ ಸಂಘಗಳು
ಉದ್ಯೋಗ ನಿಧಿ – ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ
ಯುವ ಉದ್ಯೋಗ ಸೇತು – ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ
ಉದ್ಯೋಗ ಸಂಪರ್ಕಿತ ITIಗಳು – 100 ಕ್ಯಾಂಪಸ್ಗಳು
ಶಾಲಾ ಶಿಕ್ಷಣ ಮತ್ತು ಉನ್ನತ ಕಲಿಕೆ
ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ
1,000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಶಿಕ್ಷಣದ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವುದು
CM ವಿದ್ಯಾರ್ಥಿ ಸಹಾಯ ಹಸ್ತ – ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ
ಉತ್ಪಾದನಾ ವಲಯ
ವೇಗದ ಅನುಮೋದನೆಗಳು – 100 ದಿನಗಳಲ್ಲಿ ₹43,214 ಕೋಟಿ ಹೂಡಿಕೆ
ಹಿಂದುಳಿದ ತಾಲೂಕುಗಳಿಗೆ ಹೂಡಿಕೆ ವೇಗವರ್ಧನಾ ಪ್ಯಾಕೇಜ್
ಶ್ರಮಿಕ ನಿವಾಸ – ಕೆಲಸದ ಸ್ಥಳದ ಸಮೀಪವೇ ವಸತಿ
ಡಿಜಿಟಲ್ ಕೈಗಾರಿಕಾ ಭೂ ಬ್ಯಾಂಕ್
ಜವಳಿ ನೀತಿ ಮತ್ತು ಬಳ್ಳಾರಿ ಜೀನ್ಸ್ ಪಾರ್ಕ್
ಏರೋಸ್ಪೇಸ್ ಮತ್ತು ರಕ್ಷಣಾ ನೀತಿ
ಸುಧಾರಿತ ಉತ್ಪಾದನಾ ಕ್ಲಸ್ಟರ್, ದೊಡ್ಡಬಳ್ಳಾಪುರ – 4,000 ಎಕರೆ ಪ್ರದೇಶದಲ್ಲಿ ₹20,000 ಕೋಟಿ ಹೂಡಿಕೆ
ತಂತ್ರಜ್ಞಾನ, AI, ನಾವೀನ್ಯತೆ ಮತ್ತು ಶಿಕ್ಷಣ
ಭಾರತದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ – ಬೆಂಗಳೂರು
AI ಹಬ್ ಮತ್ತು AI ನೀತಿ
6ನೇ ತರಗತಿಯಿಂದಲೇ AI ಶಿಕ್ಷಣ
ಗ್ರೀನ್ ಡೇಟಾ ಸೆಂಟರ್ ನೀತಿ
ಕರ್ನಾಟಕ ಡ್ರೋನ್ ಉನ್ನತಿ ಕೇಂದ್ರ
ಎಲೆಕ್ಟ್ರಿಕ್ ವೆಹಿಕಲ್ (EV) ಉನ್ನತಿ ಕೇಂದ್ರ
ಆರೋಗ್ಯ ಮತ್ತು ಮಾನವ ಅಭಿವೃದ್ಧಿ
ಎಲ್ಲರಿಗೂ ಆರೋಗ್ಯ – ಬಲಿಷ್ಠ ತಾಲೂಕು ಆಸ್ಪತ್ರೆಗಳು
ಕರ್ನಾಟಕ ವಿಶೇಷ ಚಿಕಿತ್ಸಾ ತಂತ್ರಜ್ಞಾನ ಜಾಲ
ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ-ICU
ನಶೆ ಮುಕ್ತ ಕರ್ನಾಟಕ – RISE ಮತ್ತು ಬೇಡ ಬ್ರೋ
ಆರೋಗ್ಯ ಸ್ಪಂದನ – ಸುಧಾರಿತ ಆಂಬುಲೆನ್ಸ್ ಸೇವೆ
ಮುಕ್ತಿವನ (1000 ರುದ್ರಭೂಮಿಗಳ ಅಭಿವೃದ್ಧಿ)
ಬೆಂಗಳೂರಿನಾಚೆಗಿನ ಕರ್ನಾಟಕ: ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ
ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ನೀತಿ
ಎರಡನೇ ಹಂತದ ನಗರಗಳಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರಗಳು (GTCs) – ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರು.
LEAP – ಸ್ಥಳೀಯ ಆರ್ಥಿಕತೆ ವೇಗವರ್ಧನಾ ಕಾರ್ಯಕ್ರಮ
ಪ್ರಜಾಸೇವೆ ಇಲಾಖೆ – IPGRS 2.0
ಸೇವಾ ಒನ್ – ಎಲ್ಲಾ ಸರ್ಕಾರಿ ಸೇವೆಗಳು ಒಂದೇ AI ವೇದಿಕೆಯಲ್ಲಿ
ಕರ್ನಾಟಕ ಡೇಟಾ ವಿನಿಮಯ ಕೇಂದ್ರ (K-DEEP)
ಭೂ ಗ್ಯಾರಂಟಿ – ಆರನೇ ಗ್ಯಾರಂಟಿ, 7 ಕೋಟಿ ನಾಗರಿಕರಿಗೆ
ಒನ್ ಬೆಂಗಳೂರು ಮತ್ತು ಒನ್ ಕರ್ನಾಟಕ ಮೊಬಿಲಿಟಿ ಆಪ್
ಇನ್ನು ಕರ್ನಾಟಕವನ್ನು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವನ್ನಾಗಿಸುವುದಷ್ಟಕ್ಕೇ ನನ್ನ ದೃಷ್ಟಿಕೋನ ಸೀಮಿತವಾಗಿಲ್ಲ. ಬದಲಿಗೆ ನಾಳಿನ ಭಾರತಕ್ಕೆ ಕರ್ನಾಟಕ ರಾಜ್ಯವನ್ನು ಮಾದರಿಯನ್ನಾಗಿ ಮಾಡುವುದಾಗಿದೆ ಎಂದು ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಈ ಸಮಯದಲ್ಲಿ 2037ರ ವೇಳೆಗೆ ನಮ್ಮ ಆರ್ಥಿಕತೆಯನ್ನು 0.343 ಟ್ರಿಲಿಯನ್ನಿಂದ $1 ಟ್ರಿಲಿಯನ್ ಮಾಡುವುದು ಹಾಗೂ ಶೇ. 5ಕ್ಕಿಂತ ಕಡಿಮೆ ಅಪೌಷ್ಟಿಕತೆ ಮತ್ತು ಶೂನ್ಯ ಬಡತನ ಮತ್ತು ಶಾಲಾ ತೊರೆಯುವಿಕೆ ಗುರಿ ಸಾಧಿಸುವ ಮಹಾ ಸಂಕಲ್ಪವನ್ನ ಸಿಎಂ ಮಾಡಿದ್ದಾರೆ.
ಕೈಗೆಟುಕುವ ಸುಲಭದ ಮತ್ತು ಅತ್ಯಾಧುನಿಕ ಆರೋಗ್ಯ ಮತ್ತು ಚಿಕಿತ್ಸಾ ವ್ಯವಸ್ಥೆ
ಆರೋಗ್ಯ ಮೂಲಭೂತ ಸೌಕರ್ಯ ಸೃಷ್ಟಿಸುವುದು
ಮುಖ್ಯಮಂತ್ರಿಗಳ ಹೊಸ ವಿಮಾ ಯೋಜನೆ
ಆರೋಗ್ಯ ಪ್ರವಾಸೋದ್ಯಮ ಬೆಂಬಲಕ್ಕಾಗಿ ಮೆಡಿಸಿಟಿ ನಿರ್ಮಾಣ
ಶಿಕ್ಷಣ ಪುನಶ್ಚೇತನ
ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುನಶ್ಚೇತನಗೊಳಿಸಲಾಗುವುದು
ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ
ಕೈಗೆಟುಕುವ ದರದಲ್ಲಿ ಶಿಕ್ಷಣ
ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಸಾರ್ವಜನಿಕ ಶಿಕ್ಷಣಕ್ಕೆ ಆದ್ಯತೆ
ಜಲ ಭದ್ರತೆ
ಕರ್ನಾಟಕದ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವುದು
ಮೇಕೆದಾಟು ಯೋಜನೆ ಜಾರಿಗೆ ವೇಗ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ನೀಡುವುದು
ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಪೂರ್ಣಗೊಳಿಸುವಿಕೆ
ರಾಜ್ಯಾದ್ಯಂತ ಜಲಮೂಲಗಳ ಪುನಶ್ಚೇತನ
ಹೂಡಿಕೆ ಮತ್ತು ಆರ್ಥಿಕ ಬಲ
ಹೆಚ್ಚು ಹೂಡಿಕೆ ಮಾಡಿ. ಹೆಚ್ಚು ಗಳಿಸಿ
ಜಾಗತಿಕ ಹೂಡಿಕೆ ಮತ್ತು अनिवासी ಭಾರತೀಯರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದೆ
ಹೊಸ ಇಲಾಖೆ C&I ಮತ್ತು ITBT ಜೊತೆಗೂಡಿ ₹3 ಲಕ್ಷ ಕೋಟಿ ಹೊಸ ಹೂಡಿಕೆಯ ಆಕರ್ಷಣೆ
ಆದಾಯ-ಉಳಿಕೆಯ ಕರ್ನಾಟಕದತ್ತ ಕಾರ್ಯನಿರ್ವಹಣೆ
ಬೆಂಗಳೂರು ಅಭಿವೃದ್ಧಿ ಮಾಡಲು ಸಹ ಸಿಎಂ ಸಂಕಲ್ಪ ಮಾಡಿದ್ದು, ಐದು ಹೊಸ ಲಾಲ್ಬಾಗ್ಗಳು ಮತ್ತು ಏಳು ಕೆರೆಗಳ ಪುನಶ್ಚೇತನ ಮಾಡುವುದು ಹಾಗೂ ಬೆಂಗಳೂರಿನಲ್ಲಿ ಲಾಲ್ಬಾಗ್ಷ್ಟೇ ದೊಡ್ಡದಾದ 5 ಹೊಸ ಹಸಿರು ತಾಣಗಳ ನಿರ್ಮಾಣ ಮತ್ತು ಬೆಂಗಳೂರಿನ 7 ಕೆರೆಗಳಿಗೆ ಹೊಸ ಜೀವ ತುಂಬಲು ಯೋಜನೆ ಹಾಕಲಾಗಿದೆ.
ಪ್ರಾದೇಶಿಕ ಸಮತೋಲನ: 5 ಐದು ಮಹಾನಗರಗಳು ಬೆಂಗಳೂರಿನ ಆಚೆಗೂ ಬೆಳವಣಿಗೆಗೆ ಚಾಲನೆ ನೀಡಲಿರುವ 5 ಹೊಸ ಪ್ರಮುಖ ನಗರಗಳು
ಸಾಮಾಜಿಕ ನ್ಯಾಯ
ನಿರಾಶ್ರಿತರಿಗೆ ಭೂಮಿ ರಾಜ್ಯದಲ್ಲಿ ವಸತಿ ಹೀನರಿಗೆ 5 ಲಕ್ಷ ನಿವೇಶನ ಹಂಚಿಕೆ
ಬಂಡವಾಳ ಹೂಡಿಕೆ: 7 ಬಿಲ್ಡ್ ಕರ್ನಾಟಕ ಕರ್ನಾಟಕದ ಬೆಳವಣಿಗೆಯನ್ನು ಬಲಪಡಿಸಲು, ವಿವಿಧ ವಲಯಗಳಲ್ಲಿ ಮೂಲಸೌಕರ್ಯ ಮತ್ತು ಇತರ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಿನ 500 ದಿನಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಗೆ ನಿರ್ಧಾರ.
ಕೊನೆಯಾಗಿ ಸಿಎಂ ನಮ್ಮ ಗುರಿ ದೃಢ ಕರ್ನಾಟಕ: ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ, ಮತ್ತು ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹತ್ತಕ್ಕೂ ಜನಪರ ಯೋಜನೆಗೆ ಚಾಲನೆ
ಇನ್ನು ಈ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹತ್ತಕ್ಕೂ ಅಧಿಕ ಜನಪರ ಮತ್ತು ನೂತನ ಯೋಜನೆಗಳಿಗೆ ಅಧಿಕೃತವಾಗಿ ಚಾಲನೆ ನೀಡಿದರು.
ಸಾರ್ವಜನಿಕ ಸೇವೆಗಳನ್ನು ಒಂದೇ ಸೂರಿನಡಿ ತರಲು ‘ಸೇವಾ ಒನ್’, ಕೃಷಿಕರ ಶ್ರೇಯೋಭಿವೃದ್ಧಿಗಾಗಿ ‘ರೈತ ಚೈತನ್ಯ ಯೋಜನೆ’, ಶಾಲಾ ಅಭಿವೃದ್ಧಿಗೆ ‘ಸಿಎಸ್ಆರ್ ಪೋರ್ಟಲ್’, ವಿದ್ಯಾರ್ಥಿ ಅನುಕೂಲಕ್ಕಾಗಿ ‘ಉಚಿತ ಬಸ್ ಪಾಸ್’, ಪ್ರಯಾಣಿಕರ ಸಾರಿಗೆ ಸುಲಭಗೊಳಿಸಲು ‘ಬಿಎಂಟಿಸಿ ಆ್ಯಪ್’ ಹಾಗೂ ‘ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್’ ಸೇರಿದಂತೆ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗುವ ‘ರೆಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್’ (RECD) ಅಳವಡಿಕೆ ಯೋಜನೆಗಳನ್ನು ಅವರು ಲೋಕಾರ್ಪಣೆಗೊಳಿಸಿದರು.
ಇದೇ ವೇದಿಕೆಯಲ್ಲಿ ಸಮಾಜದ ಹಿಂದುಳಿದ ವರ್ಗಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ನಿವೇಶನ ರಹಿತ ಬಡವರಿಗೆ 5 ಲಕ್ಷ ಹಕ್ಕುಪತ್ರ ಅಥವಾ ನಿವೇಶನಗಳನ್ನು ಹಂಚಿಕೆ ಮಾಡುವ ಮಹತ್ವದ ಯೋಜನೆ ಹಾಗೂ ದೇಶಕಾಯುವ ಸೈನಿಕರ ಕಲ್ಯಾಣಕ್ಕಾಗಿ ರೂಪಿಸಲಾದ ‘ಸೈನಿಕ ಸಮ್ಮಾನ ಯೋಜನೆ’ಯ ಅಧಿಕೃತ ಆದೇಶ ಕಡತಕ್ಕೂ ಮುಖ್ಯಮಂತ್ರಿಗಳು ತಮ್ಮ ಸಹಿಯನ್ನು ಹಾಕಿದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ: ಸಿಎಂ ಡಿ.ಕೆ. ಶಿವಕುಮಾರ್ ತಾಯಿಗೆ ನೋಟೀಸ್
