Big News: ಔಷಧ ವಲಯಕ್ಕೆ ಹೈಟೆಕ್ ಕಾವಲು: ವ್ಯಾಕ್ಸಿನ್, ಕ್ಯಾನ್ಸರ್ ಔಷಧಿಗಳಿಗೂ ಕಡ್ಡಾಯವಾಗಲಿದೆ ಕ್ಯುಆರ್ ಕೋಡ್
ನವದೆಹಲಿ: ದೇಶದ ಔಷಧ ಮಾರುಕಟ್ಟೆಯಲ್ಲಿ ನಕಲಿ ಮಾತ್ರೆ ಹಾಗೂ (Big News) ಇಂಜೆಕ್ಷನ್‌ಗಳ ಹಾವಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ (Central Government) ಅತ್ಯಂತ ದೃಢವಾದ ಹೆಜ್ಜೆಯಿಟ್ಟಿದೆ. ಭಾರತದ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಜಾಲದ ಸುರಕ್ಷತೆ ಮತ್ತು ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ವ್ಯಾಕ್ಸಿನ್‌ಗಳು (ಲಸಿಕೆಗಳು), ಆಂಟಿಮೈಕ್ರೋಬಿಯಲ್ಸ್ (ರೋಗಾಣು ನಿರೋಧಕಗಳು), ಕ್ಯಾನ್ಸರ್ ನಿರೋಧಕ ಔಷಧಿಗಳು ಹಾಗೂ ಮಾದಕ ಮತ್ತು ಮನೋರೋಗಕ್ಕೆ ಸಂಬಂಧಿಸಿದ (NDPS) ಔಷಧಿಗಳ ಪ್ಯಾಕಿಂಗ್ ಮೇಲೆಯೂ ಕ್ಯುಆರ್ ಕೋಡ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ…
