Toxic: ‘ಟಾಕ್ಸಿಕ್’ ಮುಂಗಡ ಬುಕಿಂಗ್ ಶೀಘ್ರ ಆರಂಭ: ಯಶ್ ಅಭಿನಯದ ಮೆಗಾ ಸಿನಿಮಾಗೆ ದಿನಗಣನೆ!
ಬೆಂಗಳೂರು: ರಾಕಿ ಭಾಯ್ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಮೆಗಾ ಬಜೆಟ್ ಸಿನಿಮಾವನ್ನು ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಭಾರತೀಯ ಚಿತ್ರರಂಗದ ದಂಡೇ ಈ ಸಿನಿಮಾದಲ್ಲಿ ಅಭಿನಯಿಸಿದೆ. ಬಾಲಿವುಡ್ ಮತ್ತು ಸೌತ್ ತಾರೆಯರ ಸಮಾಗಮದಿಂದಾಗಿ ಚಿತ್ರದ ಪ್ರಚಾರ ಪ್ರಕ್ರಿಯೆಗಳು ಈಗಾಗಲೇ ಭಾರಿ ಸದ್ದು ಮಾಡುತ್ತಿವೆ. ಆಗಸ್ಟ್…
