Multiplex: ಅತಿಯಾದ ಜಾಹೀರಾತು ಹಾಕಿ ಸಿನಿಮಾ ತಡವಾಗಿ ಆರಂಭ: ಮಲ್ಟಿಪ್ಲೆಕ್ಸ್ಗೆ 75,000 ರೂ. ದಂಡ ವಿಧಿಸಿದ ಗ್ರಾಹಕ ಆಯೋಗ!
ಹೈದರಾಬಾದ್: ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸಾಮಾನ್ಯ. ಆದರೆ, ಅತಿಯಾದ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸಿ ನಿಗದಿತ ಸಮಯಕ್ಕಿಂತ ತಡವಾಗಿ ಸಿನಿಮಾ ಶುರು ಮಾಡಿದ್ದಕ್ಕಾಗಿ ಹೈದರಾಬಾದ್ ಗ್ರಾಹಕ ಆಯೋಗವು ಖ್ಯಾತ ಮಲ್ಟಿಪ್ಲೆಕ್ಸ್ ತ ಚಿತ್ರಮಂದಿರಕ್ಕೆ 75,000 ರೂಪಾಯಿ ಭಾರಿ ದಂಡ (Multiplex) ವಿಧಿಸಿ ಮಹತ್ವದ ಆದೇಶ ನೀಡಿದೆ. 2025ರಲ್ಲಿ ನಡೆದಿದ್ದ ಘಟನೆ ಈ ಅಪರೂಪದ ಘಟನೆ ನಡೆದದ್ದು 2025 ರ ಜೂನ್ 20 ರಂದು. 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ಧನುಷ್…
