High Court: ಶೇ. 50ರ ಸಾಂವಿಧಾನಿಕ ಮಿತಿ ಉಲ್ಲಂಘನೆ: ರಾಜ್ಯದ ಮೀಸಲಾತಿ ಹೆಚ್ಚಳದ ಆದೇಶ ವಜಾಗೊಳಿಸಿದ ಉಚ್ಚ ನ್ಯಾಯಾಲಯ!
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಕೋಟಾವನ್ನು ಶೇಕಡಾ 50ಕ್ಕಿಂತ ಹೆಚ್ಚಿಸಿ ಜಾರಿಗೆ ತರಲಾಗಿದ್ದ ಮಹತ್ವದ ಕಾಯ್ದೆಯನ್ನು ಕರ್ನಾಟಕ ಹೈಕೋರ್ಟ್ (High Court) ಸೋಮವಾರ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಶೇಕಡಾ 50ರ ಸಾಂವಿಧಾನಿಕ ಮಿತಿಯನ್ನು ಮೀರಿ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಏರಿಸಿದ್ದ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಉನ್ನತ ನ್ಯಾಯಾಲಯ ಬ್ರೇಕ್ ಹಾಕಿದ್ದು, ಇದು ಆಡಳಿತಾರೂಢ ಸರ್ಕಾರಕ್ಕೆ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಹೈಕೋರ್ಟ್…
