Raveena Tandon: ಕೆಜಿಎಫ್’ ಬಳಿಕ ಮತ್ತೆ ಕನ್ನಡಕ್ಕೆ ಬಂದ ರವೀನಾ ಟಂಡನ್: ಶಿವಣ್ಣನ ಚಿತ್ರದಲ್ಲಿ ನಟಿಸಲು ಗ್ರ್ಯಾಂಡ್ ಎಂಟ್ರಿ!
ಬೆಂಗಳೂರು: ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿ ದೇಶದ ಪ್ರಧಾನಿ ‘ರಮಿಕಾ ಸೆನ್’ ಎಂಬ ಬಲಿಷ್ಠ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) , ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಅಭಿನಯದ ನೂತನ ಚಿತ್ರದ ಮೂಲಕ ಅವರು ಕನ್ನಡಿಗರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಪ್ರಮುಖ ಬೆಳವಣಿಗೆಯನ್ನು ಚಲನಚಿತ್ರ ತಂಡವೇ ಅಧಿಕೃತವಾಗಿ ಘೋಷಿಸಿದೆ. ಡೈರೆಕ್ಟರ್ ಶ್ರೀನಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ…
