TOP NEWS
Rahul vs Priyanka in Congress BJP Latches On to Rahul Gandhis Silence Over Raihan Vadra Exhibition Row

BJP: ರಾಹುಲ್ ಗಾಂಧಿ ಮೌನ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ‘ರಾಹುಲ್ vs ಪ್ರಿಯಾಂಕಾ’ ಸಮರ ಎಂದ ಬಿಜೆಪಿ

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಅವರ ಫೋಟೋ ಪ್ರದರ್ಶನದ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಈಗಿದು ಬಿಜೆಪಿ (BJP) ಮತ್ತು ಕಾಂಗ್ರೆಸ್ ನಡುವಿನ ನೇರ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಪ್ರಿಯಾಂಕಾ ಗಾಂಧಿ ಪುತ್ರನ ಫೋಟೋಗಳನ್ನು ಬಿಕಾನೇರ್ ಹೌಸ್ ಆಡಳಿತ ಮಂಡಳಿ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಹಿಸಿರುವ ಮೌನವನ್ನು ಬಿಜೆಪಿ ತೀವ್ರವಾಗಿ ಪ್ರಶ್ನಿಸಿದೆ. ಕಾಂಗ್ರೆಸ್ ಪಕ್ಷದೊಳಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ…

Read Full News
dk shivakumar emotional post towards congress leaders

DK Shivakumar: ಗಾಂಧಿ ಕುಟುಂಬಕ್ಕೆ ಡಿಕೆಶಿ ಭಾವನಾತ್ಮಕ ಪತ್ರ: ರಾಜಕೀಯ ಪಯಣ ನೆನೆದು ಕೃತಜ್ಞತೆ!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ನಾಳೆ ಅಧಿಕಾರ ಸೂತ್ರ ಹಿಡಿಯಲಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು, ಗಾಂಧಿ ಕುಟುಂಬದೊಂದಿಗೆ ತಮಗಿರುವ ದಶಕಗಳ ಕಾಲದ ಭಾವನಾತ್ಮಕ ನಂಟನ್ನು ನೆನಪಿಸಿಕೊಂಡು ಧನ್ಯವಾದ ಅರ್ಪಿಸಿದ್ದಾರೆ. ತಮ್ಮ ರಾಜಕೀಯ ಬದುಕಿನ ಏಳುಬೀಳುಗಳ ವಿವಿಧ ಹಂತಗಳಲ್ಲಿ ಗಾಂಧಿ ಪರಿವಾರದ ನಾಯಕರು ತಮಗೆ ನೀಡಿದ ಅಪ್ರತಿಮ ಬೆಂಬಲ, ನಂಬಿಕೆ ಮತ್ತು ಪ್ರೋತ್ಸಾಹವನ್ನು ಸ್ಮರಿಸಿ ಅವರು ಸುದೀರ್ಘವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, “ನನ್ನ ಇಂದಿನ…

Read Full News
kerala congress poster against priyanka and rahul gandhi in Wayanad

Kerala: ರಾಹುಲ್-ಪ್ರಿಯಾಂಕಾ ವಿರುದ್ಧ ತಿರುಗಿ ಬಿದ್ದ ವಯನಾಡು ಜನ

ಕೇರಳ: ಚುನಾವಣಾ ಫಲಿತಾಂಶ ಬಂದು ಹತ್ತು ದಿನ ಕಳೆದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲ ಮುಂದುವರಿದಿದ್ದು, ಈ ನಡುವೆ ವಯನಾಡ್‌ನಲ್ಲಿ (Kerala) ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಿರುದ್ಧ ಆಕ್ರೋಶದ ಪೋಸ್ಟರ್‌ಗಳು ಪ್ರತ್ಯಕ್ಷವಾಗಿವೆ. ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲಿಸಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಈ ಪೋಸ್ಟರ್‌ಗಳ ಮೂಲಕ ಹೈಕಮಾಂಡ್‌ಗೆ ಎಚ್ಚರಿಕೆ ನೀಡಲಾಗಿದೆ. ವಯನಾಡ್‌ನ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ಮುಕ್ಕಂನಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಸಂಸದರ ಕಚೇರಿಯ ಮುಂದೆ…

Read Full News