Nikhil Kumaraswamy: ರಾಮನಗರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ: ಪ್ರತಿಭಟನಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ!
ರಾಮನಗರ: ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಕಲಚೇತನರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು ಭಾರೀ ಬೆಂಬಲ ವ್ಯಕ್ತವಾಯಿತು. ರಾಜ್ಯ ಯುವ ಜನತಾದಳದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಇಂದು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾಕಾರರ ಅಹವಾಲು ಆಲಿಸಿ ಬೆಂಬಲ ಸೂಚಿಸಿದರು. ವಿಕಲಚೇತನರ ಬೇಡಿಕೆ ಏನು? ಕಳೆದ 6-7 ತಿಂಗಳಿನಿಂದ ವೃದ್ಧರು, ವಿಧವೆಯರು ಮತ್ತು ವಿಶೇಷ ಚೇತನರಿಗೆ ಮಾಸಾಶನ (ಪಿಂಚಣಿ) ಬಂದಿಲ್ಲ. ಮಾಸಾಶನವನ್ನು 1000 ದಿಂದ 2000ಕ್ಕೆ ಏರಿಸಬೇಕು,…
