Share Market: ಷೇರು ಮಾರುಕಟ್ಟೆಯಲ್ಲಿ ತೀವ್ರ ರಕ್ತಪಾತ: ಸೆನ್ಸೆಕ್ಸ್ 1,247, ನಿಫ್ಟಿ 384 ಅಂಕ ಕುಸಿತ!
ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಎದುರಾಗಿರುವ ತೀವ್ರ ಹಿನ್ನಡೆ ಹಾಗೂ ಅಮೆರಿಕದ ಸಾಲಪತ್ರಗಳ (ಬಾಂಡ್) ಮಾರಾಟದ ಭೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Share Market) ಗುರುವಾರ ಭಾರಿ ಕುಸಿತ ಕಂಡುಬಂದಿದೆ. ದಿನದ ಆರಂಭದಲ್ಲೇ ಕಡಿದಾದ ಹಾದಿ ಹಿಡಿದ ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ವಹಿವಾಟಿನ ಅಂತ್ಯದ ವೇಳೆಗೆ ತೀವ್ರ ಕುಸಿತದೊಂದಿಗೆ ವಹಿವಾಟು ಮುಗಿಸಿವೆ. ಸೆನ್ಸೆಕ್ಸ್ ಬರೋಬ್ಬರಿ ೧,೨೪೭ ಅಂಕಗಳಷ್ಟು ಸಾರ್ವತ್ರಿಕ ಕುಸಿತ ಕಂಡರೆ, ನಿಫ್ಟಿ ೩೮೪ ಅಂಕಗಳನ್ನು…
