FSSAI: ಹಾಲಿನ ದರ ಏರಿಕೆ ಚರ್ಚೆ ಬೆನ್ನಲ್ಲೇ FSSAI ಅಲರ್ಟ್: ರಾಜ್ಯಾದ್ಯಂತ ಹಾಲಿನ ಸ್ಯಾಂಪಲ್ ಸಂಗ್ರಹ!
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಸಾರ್ವಜನಿಕ ಬ್ರ್ಯಾಂಡ್ ಆಗಿರುವ ‘ನಂದಿನಿ’ ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ರಾಜ್ಯ ಆಹಾರ ಸುರಕ್ಷತಾ ಇಲಾಖೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಬೃಹತ್ ಕಾರ್ಯಾಚರಣೆಗೆ ಚಾಲನೆ ನೀಡಿದೆ. ನಂದಿನಿ ಹಾಲಿನ ಲೀಟರ್ ದರವನ್ನು ಬರೋಬ್ಬರಿ ೧೦ ರೂಪಾಯಿಗಳಷ್ಟು ಹೆಚ್ಚಳ ಮಾಡಲು ಹಾಲಿನ ಒಕ್ಕೂಟಗಳು ಸರ್ಕಾರವನ್ನು ಆಗ್ರಹಿಸಿರುವ ನಡುವೆಯೇ, ಮಾರುಕಟ್ಟೆಯಲ್ಲಿ ಸಿಗುವ ಹಾಲಿನ ನೈಜ ಗುಣಮಟ್ಟ ಹಾಗೂ ಶುದ್ಧತೆಯನ್ನು…
