KIA: ಬೆಂಗಳೂರು ಏರ್‌ಪೋರ್ಟ್ ಹೊಸ ಇತಿಹಾಸ: 40 ಕೋಟಿ ಪ್ರಯಾಣಿಕರ ಸಂಚಾರದ ಐತಿಹಾಸಿಕ ಮೈಲಿಗಲ್ಲು
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (KIA) ತನ್ನ ಆರಂಭದಿಂದ ಇದುವರೆಗೆ ಬರೋಬ್ಬರಿ 400 ಮಿಲಿಯನ್ (40 ಕೋಟಿ) ಪ್ರಯಾಣಿಕರ ಸಂಚಾರದ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ. ಕಳೆದ 2025-26ರ ಹಣಕಾಸು ವರ್ಷದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಮತ್ತು ಸರಕು ಸಾಗಣೆಯಲ್ಲಿ (ಕಾರ್ಗೋ) ಭಾರಿ ಪ್ರಗತಿ ಕಂಡುಬಂದಿದ್ದು, ವಿಮಾನ ನಿಲ್ದಾಣವು ಪ್ರಸ್ತುತ ದೊಡ್ಡ ಮಟ್ಟದ ಬೆಳವಣಿಗೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಬೆಂಗಳೂರು ಇಂಟರ್‌ನ್ಯಾಷನಲ್…
