KEA: ಕೃಷಿ ವಿಜ್ಞಾನ ಪರೀಕ್ಷಾ ಅಕ್ರಮದ ಸುದ್ದಿ ನಕಲಿ: ಕೆಇಎ ಅಧಿಕೃತ ಸ್ಪಷ್ಟನೆ
ಬೆಂಗಳೂರು: ದೇಶಾದ್ಯಂತ ಸದ್ಯ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಕೃಷಿ ವಿಜ್ಞಾನ ಕೋರ್ಸ್ಗಳ ಪ್ರಾಯೋಗಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಸುದ್ದಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ವೈರಲ್ ಆಗಿರುವ ಸುದ್ದಿಯಲ್ಲೇನಿದೆ?: ಕೃಷಿ ವಿಜ್ಞಾನ ಕೋರ್ಸ್ಗಳ ಸೀಟು ಹಂಚಿಕೆಗಾಗಿ ಮೇ 10 ರಂದು ರಾಜ್ಯದ…
