K-SET: ನಾಳೆ ರಾಜ್ಯಾದ್ಯಂತ ಕೆ-ಸೆಟ್ ಪರೀಕ್ಷೆ ಆರಂಭ: 1.29 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ಪರೀಕ್ಷೆ
ಬೆಂಗಳೂರು: ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರು ಹಾಗೂ ಪದವಿ ಕಾಲೇಜು ಉಪನ್ಯಾಸಕರ ಹುದ್ದೆಗಳಿಗೆ ಅರ್ಹತೆ ಪಡೆಯಲು ಅತ್ಯಂತ ಮಹತ್ವಪೂರ್ಣವಾಗಿರುವ ಕರ್ನಾಟಕ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯು (K-SET) ನಾಳೆ ಅಂದರೆ ಭಾನುವಾರ (ಅಕ್ಟೋಬರ್ 11) ರಾಜ್ಯಾದ್ಯಂತ ಅತ್ಯಂತ ಕಟ್ಟುನಿಟ್ಟಿನ ಹಾಗೂ ಬಿಗಿ ಭದ್ರತೆಯ ನಡುವೆ ನಡೆಯಲಿದೆ. ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಬೋಧನಾ ವೃತ್ತಿಯನ್ನು ಆಕಾಂಕ್ಷಿಸಿರುವ ಅಭ್ಯರ್ಥಿಗಳಿಗೆ ಈ ಪರೀಕ್ಷೆಯು ನಿರ್ಣಾಯಕವಾಗಿದ್ದು, ಒಟ್ಟು 37 ವಿವಿಧ ವಿಷಯಗಳಿಗೆ ನಡೆಯಲಿರುವ ಈ ಬೃಹತ್ ಪರೀಕ್ಷೆಗೆ ರಾಜ್ಯದ ನಾನಾ ಭಾಗಗಳಿಂದ…
