Jwala Gutta: ಎದೆಹಾಲು ದಾನದ ಮೂಲಕ ಹೊಸ ಕ್ರಾಂತಿ; ನವಜಾತ ಶಿಶುಗಳ ಪಾಲಿಗೆ ಸಂಜೀವಿನಿಯಾದ ಜ್ವಾಲಾ ಗುಟ್ಟಾ!
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ (Jwala Gutta) ಅವರು ಮಾಡಿರುವ ಮಾನವೀಯ ಕಾರ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಹೆಣ್ಣು ಮಗುವಿನ ಜನನದ ನಂತರದ ಮೊದಲ ಒಂದು ವರ್ಷದಲ್ಲಿ ಜ್ವಾಲಾ ಅವರು ಸುಮಾರು 60 ಲೀಟರ್‌ಗಳಷ್ಟು ಎದೆಹಾಲನ್ನು ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ದಾನ ಮಾಡುವ ಮೂಲಕ ನೂರಾರು ನವಜಾತ ಶಿಶುಗಳ ಜೀವ ಉಳಿಸಲು ನೆರವಾಗಿದ್ದಾರೆ. ಈ ಕುರಿತು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮನಸ್ಪರ್ಶಿಯಾದ ಪೋಸ್ಟ್ ಒಂದನ್ನು…
