Kichcha Sudeep: ಅಭಿನಯ ಚಕ್ರವರ್ತಿ-ಕ್ರೇಜಿ ಡೈರೆಕ್ಟರ್ ಜುಗಲ್‌ಬಂದಿ: ಕನ್ನಡಿಗರಲ್ಲಿ ಕುತೂಹಲ ಮೂಡಿಸಿದ ಪ್ರೋಮೋ ಶೂಟ್!
ಬೆಂಗಳೂರು: ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ (Kichcha Sudeep) ಹಾಗೂ ‘ಜೋಗಿ’ ಖ್ಯಾತಿಯ ಕ್ರೇಜಿ ಡೈರೆಕ್ಟರ್ ಪ್ರೇಮ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿರುವುದು ಚಂದನವನದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿದೆ. ಈ ಹಿಂದೆ ‘ದಿ ವಿಲನ್’ ಸಿನಿಮಾದ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಶಬ್ದ ಮಾಡಿದ್ದ ಈ ಮೆಗಾ ಜೋಡಿ, ಇದೀಗ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ವಿಶೇಷವೆಂದರೆ, ಈ ಹೊಸ ಬೃಹತ್ ಪ್ರಾಜೆಕ್ಟ್‌ನ ‘ಟೈಟಲ್ ಟೀಸರ್’ ಪ್ರೋಮೋ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದು, ಸಿನಿಪ್ರಿಯರಲ್ಲಿ ಕುತೂಹಲದ ಕಾವು…
