Road Mishap: ಸ್ಕೂಟರ್ ಡಿಕ್ಕಿಯಾಗಿ ಕರ್ತವ್ಯನಿರತ ಎಸ್‌ಐ ಸಾವು!
ಹೈದರಾಬಾದ್: ಗಣೇಶ ವಿಸರ್ಜನೆಗೆ ಬಂದೋಬಸ್ತ್ ನಿಯೋಜನೆಗೊಂಡಿದ್ದ ಕರ್ತವ್ಯನಿರತ ಸಬ್‌ಇನ್ಸ್‌ಪೆಕ್ಟರ್ ಒಬ್ಬರು ವೇಗವಾಗಿ ಬಂದ ಸ್ಕೂಟರ್ ಢಿಕ್ಕಿಯಾಗಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಟ್ಯಾಂಕ್ ಬಂಡ್ (Road Mishap) ಪ್ರದೇಶದಲ್ಲಿ ನಡೆದಿದೆ. ಘಟನೆಯ ಭೀಕರ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆಗೆ ಪೊಲೀಸ್ ಅಧಿಕಾರಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದಿದ್ದರು. ಇಷ್ಟಕ್ಕೂ ಆಗಿದ್ದೇನು? ಮೃತರನ್ನು ಖಮ್ಮಂ ಜಿಲ್ಲೆಯ ಕೊತ್ತಗೂಡೆಂ ಟೌನ್-೨ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ೫೫ ವರ್ಷದ ಕೆ. ವೆಂಕಣ್ಣ ಎಂದು…
