High Court: ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಮದುವೆ ಆಗಿದ್ದರೆ ಜೀವನಾಂಶದ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್
ಗುಜರಾತ್: ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಎರಡನೇ ಮದುವೆಯಾದ ಮಹಿಳೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ಪಡೆಯುವ ಅರ್ಹತೆಯಿದೆ ಎಂದು ಅಲಹಾಬಾದ್ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಮೊದಲ ಮದುವೆಯನ್ನು ಮರೆಮಾಚಿ ವಂಚನೆಯಿಂದ ಮದುವೆಯಾಗಿದ್ದರೂ, ಕಾನೂನಿನ ಕಣ್ಣಿನಲ್ಲಿ ಆ ಮದುವೆ ರದ್ದಾಗಿದ್ದರೂ ಸಹ ಪತಿಯು ಜೀವನಾಂಶ ನೀಡುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾನೇ ಮಾಡಿದ ತಪ್ಪಿನ ಲಾಭವನ್ನು ಪಡೆದುಕೊಂಡು ಮಹಿಳೆಗೆ ಜೀವನಾಂಶ ನಿರಾಕರಿಸಲು ಪತಿಗೆ ಅವಕಾಶ ನೀಡಲಾಗುವುದಿಲ್ಲ…
