Gandhi Jayanti: ಅಕ್ಟೋಬರ್ 2ರಂದು ಅರಣ್ಯ ಇಲಾಖೆಯಿಂದ ಬೃಹತ್ ಸ್ವಚ್ಛತಾ ಜಾಗೃತಿ ಅಭಿಯಾನ
ತುಮರಿ: ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ಪರಿಸರ ಕಾಳಜಿ ಮೆರೆಯಲು ತುಮರಿಯ (Gandhi Jayanti) ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು ಮುಂದಾಗಿವೆ. ದಿನಾಂಕ 02-10-2026ರ ಶುಕ್ರವಾರದಂದು ಬೆಳಿಗ್ಗೆ 9 ಗಂಟೆಗೆ ಸಿಗಂದೂರು ಸೇತುವೆಯಿಂದ ತುಮರಿಯವರೆಗೆ ಮತ್ತು ತುಮರಿಯಿಂದ ಹೊಳೆಬಾಗಿಲವರೆಗಿನ ರಸ್ತೆಬದಿಯ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುವ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಾಗೃತಿ ಮೂಡಿಸಲು ಶ್ರಮದಾನ ಈ ಸಮಾಜಮುಖಿ ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ, ತುಮರಿ ಗ್ರಾಮ ಪಂಚಾಯತಿ, ಸ್ಥಳೀಯ…
