Bigg Boss: ಬಿಗ್ ಬಾಸ್ ಮನೆಯಲ್ಲಿ ಆತ್ಮಗೌರವದ ಕಿಚ್ಚು: ‘ರಾಕ್ಷಸರು-ಗಂಧರ್ವರು’ ಟಾಸ್ಕ್ ಜಗಳಕ್ಕೆ ಶೋ ಬಿಡಲು ಗಗನ್ ಚಿನ್ನಪ್ಪ ನಿರ್ಧಾರ!
ಬೆಂಗಳೂರು: ರಿಯಾಲಿಟಿ ಶೋ ಬಿಗ್ ಬಾಸ್ Bigg Boss) ಕನ್ನಡ ಸೀಸನ್ 13ರ ಆಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವೆ ಕಟು ಮಾತುಗಳು ಹಾಗೂ ವೈಯಕ್ತಿಕ ದ್ವೇಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ನಡೆದ ‘ರಾಕ್ಷಸರು ವರ್ಸಸ್ ಗಂಧರ್ವರು’ ಅಂಕಣದ ಟಾಸ್ಕ್ ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿತ್ತು. ಸ್ಪರ್ಧಿಗಳು ಆಟದ ಭರದಲ್ಲಿ ಪರಸ್ಪರ ನಿಂದನೆ, ಕೆಟ್ಟ ಪದಗಳ ಬಳಕೆ ಹಾಗೂ ಹಿಂಸಾತ್ಮಕ ನಡವಳಿಕೆಗೆ ಇಳಿದಿದ್ದು ಪ್ರೇಕ್ಷಕರಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ, ನಟ ಗಗನ್…
