Soujanya Case: ಸೌಜನ್ಯ ಕೇಸ್ ಮರುತನಿಖೆ ಚುರುಕು: ಹಳೆಯ ವಿಡಿಯೋ ರಿಲೀಸ್ ಮಾಡಿ ಸ್ಫೋಟಕ ಆರೋಪ ಮಾಡಿದ ವಕೀಲ
ಬೆಂಗಳೂರು: ಕರ್ನಾಟಕದಾದ್ಯಂತ ದಶಕಗಳ ಕಾಲ ತೀವ್ರ ಸಂಚಲನ ಮೂಡಿಸಿರುವ ಹಾಗೂ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೀಲ ಎನಿಸಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ (Soujanya Case) ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣದ ಮರುತನಿಖೆಗೆ ಹಸಿರು ನಿಶಾನೆ ತೋರಿದ್ದು, ವಿಶೇಷ ತನಿಖಾ ತಂಡ (SIT) ಮೂರು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ಗಡುವು ವಿಧಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಹಿರಿಯ ನ್ಯಾಯವಾದಿ ಅಮೃತೇಶ್ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ, ಪ್ರಕರಣಕ್ಕೆ…
