BDA: ಬೆಂಗಳೂರು ಸಾರಿಗೆ ಕ್ರಾಂತಿಗೆ ಮತ್ತೊಂದು ಹೆಜ್ಜೆ: 1,427 ಎಕರೆ ಭೂಸ್ವಾಧೀನಕ್ಕೆ ಬಿಡಿಎ ಸಿದ್ಧತೆ, ಪಿಆರ್‌ಆರ್-2 ಯೋಜನೆಗೆ ಜೀವ!
ಬೆಂಗಳೂರು: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಮತ್ತು ಉಪನಗರಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮಹತ್ವಾಕಾಂಕ್ಷೆಯ ಎರಡನೇ ಹಂತದ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್-2) ನಿರ್ಮಾಣ ಕಾಮಗಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಹೊಸೂರು, ಮೈಸೂರು ಹಾಗೂ ತುಮಕೂರು ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಬೆಸೆಯಲಿರುವ ಈ ಬೃಹತ್ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು 1,427 ಎಕರೆ ಪ್ರದೇಶದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರ ಮುಂದಾಗಿದೆ. ಒಟ್ಟಾರೆ 52 ಕಿಲೋಮೀಟರ್ ಉದ್ದ ಮತ್ತು 10 ಪಥಗಳನ್ನು ಹೊಂದಿರುವ…
