Basavaraj Padukote: ಬಿಬಿಎಂಪಿ ಅಧಿಕಾರಿಗಳ ಮೇಲಿನ ಹಲ್ಲೆಕೋರನಿಗೆ ಮತ್ತೊಂದು ಬಿಗ್ ಶಾಕ್: ಹೊಸಕೋಟೆಯಲ್ಲಿ ಬಸವರಾಜ್ ಪಡುಕೋಟೆ ಕಟ್ಟಡ ಕಾಮಗಾರಿಗೆ ಬ್ರೇಕ್!
ಬೆಂಗಳೂರು: ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಹೋಗಿದ್ದ ಬಿಬಿಎಂಪಿ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ್ದ ಪ್ರಕರಣದ ಕಿಂಗ್‌ಪಿನ್ ಬಸವರಾಜ್ ಪಡುಕೋಟೆಗೆ (Basavaraj Padukote) ಕಾನೂನು ಸಂಕಷ್ಟಗಳು ಮುಂದುವರಿದಿವೆ. ಬೆಂಗಳೂರು ಹೊರವಲಯದ ಹೊಸಕೋಟೆಯಲ್ಲಿ ಅವರು ನಿಯಮಬಾಹಿರವಾಗಿ ಕೈಗೆತ್ತಿಕೊಂಡಿದ್ದ ಬಹುಮಹಡಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗ ಹೊಸಕೋಟೆ ನಗರ ಪಂಚಾಯಿತಿ ಅಧಿಕಾರಿಗಳು ಬಿಗಿ ತಡೆ ಒಡ್ಡಿದ್ದಾರೆ. ಪರವಾನಗಿ ಇಲ್ಲದೇ ಕಟ್ಟಡ ನಿರ್ಮಾಣ ಯಾವುದೇ ರೀತಿಯ ಅಧಿಕೃತ ಪರವಾನಗಿ ಪಡೆಯದೆ ಹಾಗೂ ಸರ್ಕಾರದ ನಕ್ಷೆ ನಿಯಮಾವಳಿಗಳನ್ನು ಗಾಳಿಗೆ ತೂರಿ…
