Bank Strike: ಸೆಪ್ಟೆಂಬರ್ 28ರಿಂದ ಸತತ 3 ದಿನ ದೇಶವ್ಯಾಪಿ ಬ್ಯಾಂಕ್ ಮುಷ್ಕರ: ಭಾನುವಾರ ಕೆಲಸ ಮಾಡಲು ಆರ್‌ಬಿಐ ಗ್ರೀನ್ ಸಿಗ್ನಲ್!
ನವದೆಹಲಿ: ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಸತತ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೂ (Bank Strike) ಮುನ್ನ, ತಮ್ಮ ತುರ್ತು ಹಣಕಾಸು ವಹಿವಾಟುಗಳನ್ನು ಪೂರ್ಣಗೊಳಿಸಲು ಬ್ಯಾಂಕ್ ಗ್ರಾಹಕರಿಗೆ ಒಂದು ಹೆಚ್ಚುವರಿ ದಿನದ ಸಿಹಿ ಸುದ್ದಿ ಲಭಿಸಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ೨೬ರಂದು ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ ೨೭ರಂದು ಭಾನುವಾರ ಇರುವುದರಿಂದ ಬ್ಯಾಂಕುಗಳಿಗೆ ಸಾಪ್ತಾಹಿಕ ರಜೆ ಇರುತ್ತದೆ. ಇದರ ಬೆನ್ನಲ್ಲೇ ಮೂರು ದಿನಗಳ ಮುಷ್ಕರವೂ ಸೇರಿಕೊಂಡರೆ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡು ಸಾರ್ವಜನಿಕರಿಗೆ…
