RBI: ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೆ ಹಣ ಮಾಯವಾದರೆ ಇನ್ಮುಂದೆ ಆರ್‌ಬಿಐ ನೀಡಲಿದೆ ಪರಿಹಾರ!
ಬೆಂಗಳೂರು: ನೀವು ಕಷ್ಟಪಟ್ಟು ದುಡಿದು ಬ್ಯಾಂಕಿನಲ್ಲಿಟ್ಟ ಹಣ ನಿಮ್ಮ ಅರಿವಿಲ್ಲದೆಯೇ ರಾತ್ರೋರಾತ್ರಿ ಮಾಯವಾದರೆ ಎಂಥವರಿಗಾದರೂ ದಿಗಿಲಾಗುವುದು ಸಹಜ. ಇಂತಹ ಸೈಬರ್ ವಂಚನೆ ನಡೆದಾಗ ಹಳೇ ದಿನಗಳಲ್ಲಿ ಗ್ರಾಹಕರು ಬ್ಯಾಂಕುಗಳ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಹೋಗುತ್ತಿದ್ದರು. ಬ್ಯಾಂಕುಗಳು ತಪ್ಪು ನಿಮ್ಮದೇ ಎಂದು ಜಾರಿಕೊಳ್ಳುತ್ತಿದ್ದವು. ಆದರೆ ಇನ್ಮುಂದೆ ಡಿಜಿಟಲ್ ಪೇಮೆಂಟ್ ವಲಯದಲ್ಲಿ ಗ್ರಾಹಕರಿಗೆ ಸಿಂಹಸ್ವಪ್ನವಾಗಿದ್ದ ಆನ್‌ಲೈನ್ ಲೂಟಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಐತಿಹಾಸಿಕ ಬ್ರೇಕ್ ಹಾಕಿದೆ. ಜೂನ್ 24 ರಂದು ಹೊರಡಿಸಲಾದ ಹೊಸ ‘ಬಾಧ್ಯತಾ ತಿದ್ದುಪಡಿ ನಿಯಮಾವಳಿ’ಗಳ…
