Pakistan: ಪಾಕಿಸ್ತಾನದಲ್ಲಿ ತರಬೇತಿ ವಿಮಾನ ಪತನ: ಇಬ್ಬರು ಸೇನಾ ಪೈಲಟ್‌ಗಳು ದುರ್ಮರಣ!
ಇಸ್ಲಾಮಾಬಾದ್: ತಾಂತ್ರಿಕ ದೋಷದ ಕಾರಣದಿಂದಾಗಿ ಪಾಕಿಸ್ತಾನ ಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡು, ಅದರಲ್ಲಿದ್ದ ಇಬ್ಬರು ಯೋಧರು ದಾರುಣವಾಗಿ ಸಜೀವ (Pakistan) ದಹನಗೊಂಡಿರುವ ಘಟನೆ ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾ ಸಮೀಪ ಅಕ್ಟೋಬರ್ 12 ರಂದು (ಸೋಮವಾರ) ಸಂಭವಿಸಿದೆ. ವಿಮಾನದಲ್ಲಿದ್ದ ಹಿರಿಯ ಪೈಲಟ್ ಹಾಗೂ ತರಬೇತಿ ಪಡೆಯುತ್ತಿದ್ದ ಮತ್ತೊಬ್ಬ ಅಧಿಕಾರಿ ಈ ಭೀಕರ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಅಧಿಕೃತ ಮಾಧ್ಯಮ ವಿಭಾಗ ಖಚಿತಪಡಿಸಿದೆ. ತಾಂತ್ರಿಕ ದೋಷದಿಂದ ನಡೆದ ಅಪಘಾತ ಪಾಕಿಸ್ತಾನ್ ಆರ್ಮಿ ಏವಿಯೇಷನ್‌ಗೆ ಸೇರಿದ ‘ಮುಶ್ಶಾಕ್’…
