Air India: ಏರ್ ಇಂಡಿಯಾ ಸಹ-ಪೈಲಟ್ ಅಮಾನತು: ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಸಿಬ್ಬಂದಿ
ನವದೆಹಲಿ: ಏರ್ ಇಂಡಿಯಾ (Air India) ವಿಮಾನಯಾನ ಸಂಸ್ಥೆಯ ಪೈಲಟ್‌ಗಳ ಬೇಜವಾಬ್ದಾರಿ ವರ್ತನೆಗಳು ಸರಣಿಯಂತೆ ಮುಂದುವರಿದಿದ್ದು, ಜ್ಯೂರಿಚ್‌ನಿಂದ ದೆಹಲಿಗೆ ಹೊರಡಬೇಕಿದ್ದ ವಿಮಾನದ ಸಹ-ಪೈಲಟ್ ಒಬ್ಬರು ಮದ್ಯಪಾನ ಮಾಡಿ ಸಿಕ್ಕಿಬಿದ್ದು ಅಮಾನತುಗೊಂಡಿದ್ದಾರೆ. ಸೆಪ್ಟೆಂಬರ್ 6 ರಂದು ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ ವಿಮಾನ ಟೇಕ್ ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ನಡೆಸಲಾದ ವೈದ್ಯಕೀಯ ತಪಾಸಣೆಯಲ್ಲಿ ಸಹ-ಪೈಲಟ್ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಕೆಲವು ವಾರಗಳ ಹಿಂದೆಯಷ್ಟೇ ಫುಕೆಟ್‌ನಿಂದ ದೆಹಲಿಗೆ ಬಂದಿದ್ದ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿರುವುದು ಪತ್ತೆಯಾಗಿ ಭಾರಿ…
