TOP NEWS

Rashmika Mandanna: ನೀವು ಊಹಿಸದ ಬಿರುಗಾಳಿ ಬರಲಿದೆ!: ‘ಮೈಸಾ’ ಪೋಸ್ಟರ್ ಶೇರ್ ಮಾಡಿ ಮಾಸ್ ಅಪ್‌ಡೇಟ್ ಕೊಟ್ಟ ರಶ್ಮಿಕಾ!

Rashmika Mandanna Delights Fans with Mysaa Release Date Announcement

ಬೆಂಗಳೂರು: ಸ್ಯಾಂಡಲ್‌ವುಡ್ ಮೂಲದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹುನಿರೀಕ್ಷಿತ ‘ಮೈಸಾ’ (Mysaa) ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ, ಚಿತ್ರವು ಇದೇ ನವೆಂಬರ್ 27ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ.

ನವೆಂಬರ್‌ 27ಕ್ಕೆ ತೆರೆಗೆ ಬರಲಿದೆ ಮೈಸಾ

ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿರುವ ರಶ್ಮಿಕಾ, “ಮೈಸಾ! ಇದೊಂದು ತೀವ್ರ ಕೋಪ, ಕಷ್ಟ, ಹೃದಯಂಗಮ ನೋವು, ಧೈರ್ಯ ಮತ್ತು ಶಕ್ತಿಯ ಸಮ್ಮಿಶ್ರಣ. ನೀವು ಊಹಿಸಲೂ ಸಾಧ್ಯವಾಗದಂತಹ ಒಂದು ದೈತ್ಯ ಬಿರುಗಾಳಿ. ಇದೇ ಮೈಸಾ! ನವೆಂಬರ್ 27, 2026ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ ಬರಲಿದೆ” ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಮೆಂಟ್ ಸೆಕ್ಷನ್‌ನಲ್ಲಿ ಶುಭಾಶಯಗಳ ಸುರಿಮಳೆಯೇ ಹರಿಯುತ್ತಿದೆ.

ಮತ್ತೊಂದೆಡೆ, ಹಿಪ್ ಇಂಜುರಿಯಿಂದ (ಸೊಂಟದ ಗಾಯ) ಬಳಲುತ್ತಿದ್ದ ರಶ್ಮಿಕಾ ಮಂದಣ್ಣ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೆ ಶೂಟಿಂಗ್ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ‘ಮೈಸಾ’ ಸಿನಿಮಾದ ಸಾಹಸ ಸನ್ನಿವೇಶಗಳ ಶೂಟಿಂಗ್ ವೇಳೆಯೇ ರಶ್ಮಿಕಾ ಈ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ವೈದ್ಯರ ಸಲಹೆಯಂತೆ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯುತ್ತಿದ್ದರು. ತಮ್ಮ ಆರೋಗ್ಯದ ಸ್ಥಿತಿಗತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದ ಅವರು, ಈ ಬಿಡುವಿನ ಸಮಯದಲ್ಲಿ ಮನೆಯಲ್ಲೇ ಕಾಲ ಕಳೆದಿದ್ದರು.

ಗಾಯದಿಂದ ಚೇತರಿಸಿಕೊಂಡ ನಟಿ

ತಮ್ಮ ಸುದೀರ್ಘ ವಿಶ್ರಾಂತಿಯ ದಿನಗಳ ಸುಂದರ ಕ್ಷಣಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರಶ್ಮಿಕಾ, “ನಾನು ಶೀಘ್ರದಲ್ಲೇ ಮತ್ತೆ ಕೆಲಸಕ್ಕೆ ಮರಳುತ್ತಿದ್ದೇನೆ. ಆದರೆ ಈ ಅದ್ಭುತವಾದ ಬಿಡುವಿನ ದಿನಗಳನ್ನು ನಿಜಕ್ಕೂ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಮತ್ತೆ ಸೆಟ್‌ಗೆ ಮರಳುತ್ತಿರುವುದು ಅವರ ಅಭಿಮಾನಿಗಳಿಗೆ ದ್ವಿಗುಣ ಸಂತಸ ತಂದಿದೆ.

ರವೀಂದ್ರ ಪುಲ್ಲೆ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಗೂ ‘ಅನ್‌ಫಾರ್ಮುಲಾ ಫಿಲ್ಮ್ಸ್’ ಸಂಸ್ಥೆ ನಿರ್ಮಿಸುತ್ತಿರುವ ‘ಮೈಸಾ’ ಸಿನಿಮಾವು ಸಂಪೂರ್ಣವಾಗಿ ಗಿರಿಜನ ಅಥವಾ ಬುಡಕಟ್ಟು ಪ್ರದೇಶದ ಹಿನ್ನೆಲೆಯಲ್ಲಿ ಸಾಗುವ ಕಥಾಹಂದರವನ್ನು ಹೊಂದಿದೆ. ಭರಪೂರ್ ಸಾಹಸ, ಭಾವನಾತ್ಮಕ ಸನ್ನಿವೇಶಗಳು ಹಾಗೂ ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಈ ಚಿತ್ರದಲ್ಲಿ ರಶ್ಮಿಕಾ ಸಂಪೂರ್ಣ ವಿಭಿನ್ನ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೆಂಬರ್ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ರಶ್ಮಿಕಾ ಅಭಿಮಾನಿಗಳು ಬೆಳ್ಳಿತೆರೆಯ ಮೇಲೆ ತಮ್ಮ ನೆಚ್ಚಿನ ನಟಿಯನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ: ಡ್ಯೂಪ್ ಇಲ್ಲದೇ ‘ಅಂಡರ್‌ವಾಟರ್’ ಫೈಟ್ ನಡೆಸಿ ಸೈ ಎನಿಸಿಕೊಂಡ ರಶ್ಮಿಕಾ!

ಬೆಂಗಳೂರು:

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ ಮೈಲಿಗಲ್ಲು ನೆಡಲು ಸಜ್ಜಾಗಿದೆ. ಈ ಚಿತ್ರಕ್ಕಾಗಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ನಟಿಯೊಬ್ಬರು ನೀರಿನ ಅಡಿಯಲ್ಲಿ (Underwater) ಭೀಕರ ಸಾಹಸ ದೃಶ್ಯದಲ್ಲಿ ಅಭಿನಯಿಸಿದ್ದು, ಈ ರೋಮಾಂಚನಕಾರಿ ಶೂಟಿಂಗ್ ಅನ್ನು ಚಿತ್ರತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಆಕ್ಷನ್ ದೃಶ್ಯದ ಪ್ರಮುಖ ಆಕರ್ಷಣೆಯೆಂದರೆ, ರಶ್ಮಿಕಾ ಯಾವುದೇ ಬಾಡಿ ಡಬಲ್ ಅಥವಾ ಡ್ಯೂಪ್ ಸಹಾಯವಿಲ್ಲದೆ ಸ್ವತಃ ತಾವೇ ಸಾಹಸ ಮೆರೆದಿದ್ದಾರೆ. ಕೇವಲ 2 ದಿನಗಳ ಕಾಲ ನಡೆದ ಈ ಶೂಟಿಂಗ್‌ನಲ್ಲಿ ರಶ್ಮಿಕಾ ಬರೋಬ್ಬರಿ 20 ಗಂಟೆಗೂ ಹೆಚ್ಚು ಕಾಲ ನೀರಿನಡಿಯಲ್ಲೇ ಕಳೆದು ಈ ದೃಶ್ಯಕ್ಕೆ ಜೀವ ತುಂಬಿದ್ದಾರೆ. ಶೂಟಿಂಗ್ ಹಂತದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೈಸಾ ತಂಡ, “ಭಾರತೀಯ ಸಿನಿರಸಿಕರು ಇದುವರೆಗೆ ಎಂದೂ ಕಾಣದ ರೋಮಾಂಚನಕಾರಿ ಆಕ್ಷನ್ ಜಗತ್ತನ್ನು ಕಣ್ತುಂಬಿಕೊಳ್ಳಲು ಸಿದ್ಧರಾಗಿ” ಎಂದು ಬರೆದುಕೊಂಡಿದೆ.

ಏನಿದು ‘ಮೈಸಾ’ ಚಿತ್ರದ ವಿಶೇಷತೆ?:

ರವೀಂದ್ರ ಪುಲ್ಲೆ ನಿರ್ದೇಶನ ಹಾಗೂ ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಮೈಸಾ’ ಸಂಪೂರ್ಣವಾಗಿ ಗಿರಿಜನ ಅಂದರೆ ಬುಡಕಟ್ಟು ಸಂಸ್ಕೃತಿ ಮತ್ತು ಹಿನ್ನೆಲೆಯನ್ನು ಹೊಂದಿರುವ ಎಮೋಷನಲ್ ಆಕ್ಷನ್ ಥ್ರಿಲ್ಲರ್ ಆಗಿದೆ. ಕೇವಲ ಗ್ಲಾಮರ್ ಮತ್ತು ರೊಮ್ಯಾಂಟಿಕ್ ಪಾತ್ರಗಳಿಗೆ ಸೀಮಿತವಾಗದೆ, ಸಂಪೂರ್ಣ ಮಾಸ್ ಹಾಗೂ ರಗಡ್ ಲುಕ್‌ನಲ್ಲಿ ಆಕ್ಷನ್ ಹೀರೋಯಿನ್ ಆಗಿ ಮೆರೆಯಲು ರಶ್ಮಿಕಾ ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ನೋಡಿ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರಬಂದ ಪವಿ ಪೂವಪ್ಪ!: ಯಶ್ ಸಿನಿಮಾ ಬಗ್ಗೆ ಬಿಗ್ ಬಾಸ್ ನಟಿ ಹೇಳಿದ್ದೇನು?

Leave a Reply

Your email address will not be published. Required fields are marked *