Rashmika Mandanna: ನೀವು ಊಹಿಸದ ಬಿರುಗಾಳಿ ಬರಲಿದೆ!: ‘ಮೈಸಾ’ ಪೋಸ್ಟರ್ ಶೇರ್ ಮಾಡಿ ಮಾಸ್ ಅಪ್‌ಡೇಟ್ ಕೊಟ್ಟ ರಶ್ಮಿಕಾ!
ಬೆಂಗಳೂರು: ಸ್ಯಾಂಡಲ್‌ವುಡ್ ಮೂಲದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬಹುನಿರೀಕ್ಷಿತ ‘ಮೈಸಾ’ (Mysaa) ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಅಧಿಕೃತವಾಗಿ ಹೊರಬಿದ್ದಿದೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿರುವ ರಶ್ಮಿಕಾ, ಚಿತ್ರವು ಇದೇ ನವೆಂಬರ್ 27ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ. ಈ ಪ್ರಕಟಣೆ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ನವೆಂಬರ್ 27ಕ್ಕೆ ತೆರೆಗೆ ಬರಲಿದೆ ಮೈಸಾ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ…
