TOP NEWS
Andra Pradesh YSRCP MLC Duvvada Srinivas missing

Andra Pradesh: ಆಂಧ್ರದಲ್ಲಿ ಹೈಡ್ರಾಮಾ: ವೈಎಸ್‌ಆರ್‌ಸಿಪಿ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ದಿಢೀರ್ ನಾಪತ್ತೆ!

ಶ್ರೀಕಾಕುಲಂ (ಆಂಧ್ರಪ್ರದೇಶ): ಆಂಧ್ರಪ್ರದೇಶದ (Andra Pradesh) ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ವೈಎಸ್‌ಆರ್‌ಸಿಪಿ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ಅವರು ದಿಢೀರನೆ ನಾಪತ್ತೆಯಾಗಿದ್ದು, ಶ್ರೀಕಾಕುಲಂ ಜಿಲ್ಲೆಯಲ್ಲಿ ಭಾರಿ ರಾಜಕೀಯ ಉದ್ವಿಗ್ನತೆ ಸೃಷ್ಟಿಸಿದೆ. ವಿಚಾರಣೆಗೆ ಹಾಜರಾಗಲು ತೆಕ್ಕಲಿಯಿಂದ ಕೊತ್ತೂರು ಪೊಲೀಸ್ ಠಾಣೆಗೆ ಹೊರಟಿದ್ದ ಅವರು ನಿಗದಿತ ಸಮಯಕ್ಕೆ ಅಲ್ಲಿಗೆ ತಲುಪದೆ ಇದ್ದುದರಿಂದ ಹೈಡ್ರಾಮಾ ಶುರುವಾಗಿದೆ. ದುವ್ವಾಡ ಶ್ರೀನಿವಾಸ್ ಅವರು ತಮ್ಮ ನಿವಾಸದಿಂದ ಖಾಸಗಿ ವಾಹನದಲ್ಲಿ ಹೊರಟಿದ್ದರಾದರೂ ಮಾರ್ಗಮಧ್ಯೆ ಎಲ್ಲಿಗೆ ಹೋದರು ಎಂಬುದು…

Read More
Eggs Hurled at tcm mp Mahua Moitra

TMC: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ವಿರುದ್ಧ ಜನಾಕ್ರೋಶ: ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ದಾಳಿ

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮುಖಂಡರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಸಂಸದೆ ಮಹುವಾ ಮೊಯಿತ್ರಾ ಮೇಲೆ ಮೊಟ್ಟೆ ಎಸೆದ ಅಪರಿಚಿತರು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಬುಧವಾರದಂದು ಹೋಟೆಲೊಂದರಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಪ್ರಮುಖ ಸಭೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ. ಸಭೆಯ ಮಧ್ಯೆ ದಿಢೀರನೆ ನುಗ್ಗಿದ ಅಪರಿಚಿತರ ಗುಂಪೊಂದು ಸಂಸದೆಯನ್ನು ಗುರಿಯಾಗಿಸಿಕೊಂಡು ಮೊಟ್ಟೆಗಳನ್ನು…

Read More
Mysuru Chamundi hills yathindra Siddaramaiah gives information about ashada days

Chamundi Hills: ಚಾಮುಂಡಿಬೆಟ್ಟದಲ್ಲಿ ಇನ್ಮುಂದೆ ಸಾಮಾನ್ಯ ಭಕ್ತರಿಗೇ ಫಸ್ಟ್ ಪ್ರಿಫರೆನ್ಸ್! ₹300 ವಿಶೇಷ ಟಿಕೆಟ್‌ ರದ್ದು

ಮೈಸೂರು: ಸಾಂಸ್ಕೃತಿಕ ನಗರಿಯ ಐತಿಹಾಸಿಕ ಚಾಮುಂಡಿಬೆಟ್ಟದಲ್ಲಿ (Chamundi Hills) ಮುಂಬರುವ ಜುಲೈ 17 ರಿಂದ ಅತ್ಯಂತ ಸಡಗರದ ಆಷಾಢ ಶುಕ್ರವಾರಗಳ ವಿಶೇಷ ಪೂಜಾ ಮಹೋತ್ಸವಗಳು ಆರಂಭಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾದರು. ಬಳಿಕ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಈ ಬಾರಿ ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಸುಗಮ ದರ್ಶನ ಕಲ್ಪಿಸಲು ಹಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದರು. ಕಳೆದ…

Read More
Ayodhya Needs Beware of Donation Thieves Board Now BK Hariprasad taunts bjp

BK Hariprasad: ಅಯೋಧ್ಯೆಯಲ್ಲಿ ಇನ್ಮುಂದೆ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಬೋರ್ಡ್ ಹಾಕಬೇಕು: ರಾಮಮಂದಿರ ಹಗರಣಕ್ಕೆ ಬಿ.ಕೆ. ಹರಿಪ್ರಸಾದ್ ಲೇವಡಿ

ಬೆಂಗಳೂರು: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಬಿಜೆಪಿ ಹಾಗೂ ಮಂದಿರದ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂಬ ಬೋರ್ಡ್‌ಗಳನ್ನು ನೋಡಿರುತ್ತೇವೆ. ಆದರೆ ಅಯೋಧ್ಯೆಯ ಲೂಟಿಯನ್ನು ಗಮನಿಸಿದರೆ, ಇನ್ಮುಂದೆ ಅಲ್ಲಿ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂದು ಬೋರ್ಡ್ ಹಾಕಬೇಕಾದ ದುಸ್ಥಿತಿ ಬಂದಿದೆ” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. ಅಧಿಕಾರಕ್ಕೆ…

Read More
Bengaluru footpath will be cleared soon krishna byre gowda

Bengaluru: ಶೇ. 15 ರಷ್ಟು ಫುಟ್‌ಪಾತ್ ತೆರವಿಗೆ ನಿರ್ಧಾರ: ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಪಾದಚಾರಿಗಳ ಹಿತದೃಷ್ಟಿಯಿಂದ ಹಾಗೂ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶದನ್ವಯ ಫುಟ್‌ಪಾತ್ (ಕಾಲುದಾರಿ) ಒತ್ತುವರಿ ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲುದಾರಿಗಳ ಅಕ್ರಮ ಆಕ್ರಮಣದಿಂದಾಗಿ ನಿತ್ಯ ಸಂಕಷ್ಟ ಎದುರಿಸುತ್ತಿರುವ ಸಾರ್ವಜನಿಕರ ಹಿತ ಕಾಯಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಹೀಗಾಗಿ ರಸ್ತೆಬದಿಯ ವ್ಯಾಪಾರಿಗಳು ಸರ್ಕಾರದೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ವಿನಂತಿಸಿದರು. 2,000 ಕಿಲೋಮೀಟರ್ ಒತ್ತುವರಿ ಮುಕ್ತ ರಾಜಧಾನಿಯಲ್ಲಿ…

Read More
delhi government planning to avoid air pollution new trick

Air Pollution: ದೆಹಲಿಯಲ್ಲಿ ಚಳಿಗಾಲದ ಮಾಲಿನ್ಯಕ್ಕೆ ಮುಂಚಿತವಾಗಿಯೇ ಮಾಸ್ಟರ್ ಪ್ಲಾನ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಸೃಷ್ಟಿಯಾಗುವ ಭೀಕರ ವಾಯುಮಾಲಿನ್ಯದ (Air Pollution) ಬಿಕ್ಕಟ್ಟನ್ನು ಮೊದಲೇ ನಿಯಂತ್ರಿಸಲು ದೆಹಲಿ ಸರ್ಕಾರವು ಭರ್ಜರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅಪಾಯಕಾರಿ ಮಟ್ಟಕ್ಕೆ ತಲುಪದಂತೆ ತಡೆಯಲು ಈ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಇವು ನವೆಂಬರ್ 1 ರಿಂದ ಫೆಬ್ರವರಿ 28 ರವರೆಗೆ ಕಡ್ಡಾಯವಾಗಿ ಜಾರಿಯಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. PUC ಇಲ್ಲದೇ ಇಂಧನ ಇಲ್ಲ ಈ ನೂತನ ನಿಯಮಗಳಿಂದಾಗಿ ವಾಹನ ಸವಾರರು ಜಾಗರೂಕರಾಗಿರಬೇಕಾಗುತ್ತದೆ….

Read More
India open visa for Bangladesh people many people standing in q

Bangladesh: ರಾಜತಾಂತ್ರಿಕ ಬಿಕ್ಕಟ್ಟಿದ್ದರೂ ತಪ್ಪದ ಭಾರತದ ಮೇಲಿನ ಅವಲಂಬನೆ; ವೀಸಾ ಕೇಂದ್ರಗಳ ಮುಂದೆ ಬಾಂಗ್ಲಾ ಜನರ ಕಿಲೋಮೀಟರ್ ಉದ್ದದ ಕ್ಯೂ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ (Bangladesh) ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಎಷ್ಟೇ ಏರುಪೇರಾಗಿದ್ದರೂ, ಅಲ್ಲಿನ ಸಾಮಾನ್ಯ ಜನರಿಗೆ ಭಾರತದ ಮೇಲಿರುವ ಅವಲಂಬನೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರದ ಮುಂದೆ ನಿಂತಿರುವ ನೂರಾರು ಮೀಟರ್ ಉದ್ದದ ಕ್ಯೂ ಸಾಕ್ಷಿಯಾಗಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಭಾರತ ಸರ್ಕಾರವು ಬಾಂಗ್ಲಾ ನಾಗರಿಕರಿಗೆ ಪ್ರವಾಸಿ ವೀಸಾ (ಟೂರಿಸ್ಟ್ ವೀಸಾ) ಸೇವೆಗಳನ್ನು ಪುನಾರಂಭಿಸಿದ್ದು, ವೀಸಾ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ವೀಸಾ ಸೇವೆ ಶುರುವಾದ ಕೇವಲ 24 ಗಂಟೆಗಳಲ್ಲಿ…

Read More