TOP NEWS

KH Muniyappa: ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕ್ರಮ‌

Major Relief Govt Moves to Increase BPL Card Annual Income Ceiling to 3 Lakh KH Muniyappa

ಬೆಂಗಳೂರು: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ(KH Muniyappa) ಹಾಗೂ ಗ್ಯಾರಂಟಿ ಯೋಜನೆಗಳ‌ ಅನುಷ್ಠನಾ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ರವರ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು

ರಾಜ್ಯವನ್ನ ಹಸಿವು ಮುಕ್ತ ಮಾಡಿದೆ

ಈ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು ಆಹಾರ ಇಲಾಖೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ಅನ್ನಬಾಗ್ಯ ಯೋಜನೆಯ ಮೂಲಕ ರಾಜ್ಯ ಸುಮಾರು 4.42ಕೋಟಿ ಫಲಾನುಭವಿಗಳಿಗೆ 10ಕೆಜಿ ಪಡಿತರ ವಿತರಣೆ ಮಾಡುತ್ತಿದ್ದೇವೆ ಇದರ ಮೂಲಕ ರಾಜ್ಯವನ್ನು ನಮ್ಮ ಸರ್ಕಾರವು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಿದೆ.

ಅನ್ನಭಾಗ್ಯ ಯೋಜನೆಯು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾಗಿದ್ದು ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಅಂದಿನ ನಮ್ಮ ಯುಪಿಎ ಸರ್ಕಾರ ಆಹಾರ ಬದ್ರತೆ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಈ ಮಹತ್ವದ ಯೋಜನೆ ಅನುಷ್ಠಾನವಾಗಿದೆ ಎಂದರು

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ಪ್ರತಿ ಅರ್ಹ ಫಲಾನುಭವಿಗೆ 10ಕೆಜಿ ಪಡಿತರ ಧಾನ್ಯವಿತರಣೆ ಮಾಡುವ ಮೂಲಕ ಜನರ ಬದುಕಿಗೆ ಆಸರೆಯಾಗಿದೆ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಮೂಲಕ ತೂಕ ಮತ್ತು ಅಳತೆಯಲ್ಲಿ ತಪಾಸನೆ ಮಾಡಲು ಸುಮಾರು 33 ವಾಹನಗಳನ್ನು ಇಲಾಖೆಗೆ ಹಂಚಿಕೆ ಮಾಡಿದ್ದು ಇಲ್ಲಿಯವರೆಗೂ ಕಾನೂನು ಪಾಪನ ಶಾಸ್ತ್ರ ಇಲಾಖೆಯು ಕಳೆದ ಮೂರು ವರ್ಷದಲ್ಲಿ ಸುಮಾರು 250 ಕೋಟಿರೂಗಳ ರಾಜಸ್ವ ಸಂಗ್ರಹ ಮಾಡಿದ್ದು ಗ್ರಾಹಕರಿಗೆ ತೂಕದಲ್ಲಿ ಯಾವುದೆ ವ್ಯತ್ಯಾಸಗಳು ಕಾಣದಂತೆ ಕ್ರಮ ವಹಿಸುತ್ತಿದೆ ಎಂದರು.

ಪಡಿತರ ವಿತರಣೆಯಲ್ಲಿ ಕಾಳಸಂತೆಯನ್ನು ತಡೆಯಲು ಕ್ರಮವಹಿಸಿದ್ದು ಗೋದಾಮುಗಳಿಗೆ ಸಿಸಿ ಕ್ಯಾಮರಾ ಹಾಗೂ ಪಡಿತರ ವಾಹನಗಳಿಗೆ ಜಿಪಿಎಸ್ ಇವುಗಳನ್ನು ನಿಗಾವಹಿಸಲು ಕಮಾಂಡ್ ಕಂಟ್ರೋಲ್ ರೂಂ ಅನ್ನು ಕೇಂದ್ರ ಕಛೇರಿಯಲ್ಲಿ ನಿರ್ಮಿಸಲಾಗುತ್ತಿದೆ

ಎಂಎಸ್ ಪಿ ಯೋಜನೆಯಡಿ (5.60 LMT) ಐದು ಲಕ್ಷದ 60 ಸಾವಿರ ಲ್ಯಾಕ್ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸಿದ್ದು ಅದನ್ನು ಶುದ್ದೀಕರಿಸಿ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

ಇಂದಿರಾ ಕಿಟ್ ನೀಡಲು ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದ್ದು ಅಂತಿಮ ಹಂತದಲ್ಲಿ ಇದೆ ಮುಂದಿನ ಎರಡು ತಿಂಗಳಲ್ಲಿ ಕಿಟ್ ವಿತರಣೆಗೆ ಕಾರ್ಯರೂಪಿಸುತ್ತಿದ್ದೇವೆ ಇದು ಬಹಳ ದೊಡ್ಡಮಟ್ಟದ ಯೋಜನೆ ಸುಮಾರು 6000 ಕೋಟಿ ರೂಗಳು ವೆಚ್ಚವಾಗಲಿದ್ದು ಬಹಳ ಸೂಕ್ಷ್ಮವಾಗಿ ನಡೆಸಬೇಕಾಗುತ್ತಿರುವುದರಿಂದ ಸ್ವಲ್ಪ ವಿಲಂಭವಾಗುತ್ತಿದೆ ಆದಷ್ಟು ಬೇಗ ಈ ಪ್ರಕ್ರಿಯೆಯು ಅಂತಿಮವಾಗಲಿದೆ ಎಂದರು

ಕೇಂದ್ರ ಸರ್ಕಾರದ ಮಾನದಂಡಗಳ ಅನ್ವಯ ಪಡಿರ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದ್ದು ಯಾವೊಂದು ಕಾರ್ಡ್ ರದ್ದು ಪಡಿಸುವುದಿಲ್ಲಾ ಅನರ್ಹ ಕಾರ್ಡ್ ಗಳನ್ನು ನಾವು ಎಪಿಎಲ್ ಗೆ ವರ್ಗಾಯಿಸಲಾಗುತ್ತಿದೆ ಎಂದರು

ಕಾಳಸಂತೆಗೆ ಮಾರಾಟವಾಗುವ ಪಡಿತರ ಅಕ್ರಮ ತಡೆಯಲು ಸುಮಾರು 1497 FIR. ಪ್ರಕರಣಗಳನ್ನು ದಾಖಲಿಸಿದ್ದು 50 ಕೋಟಿರೂಗಳ ಪಡಿತರ ವಶಪಡಿಸಿಕೊಂಡಿದ್ದೇವೆ

ಬಿಪಿಎಲ್ ಪಡೆಯಲು ನಿಗದಿಪಡಿಸಿದ 1ಲಕ್ಷ20 ಸಾವಿರ ವಾರ್ಷಿಕ ಆದಾಯವನ್ನು ಆಡಳಿತಾತ್ಮಕ ಸುಧಾರಣೆ ಆಯೋಗದ ಶಿಪಾರಸ್ಸಿನಂತೆ 3 ಲಕ್ಷಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ರಾಜ್ಯದಾದ್ಯಂತ ಇರುವ 20259 ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಸಚಿವರು ಗ್ಯಾರಂಟಿ ಯೋಜನೆಯ ಅಧ್ಯಕ್ಷರ ಭಾವಚಿತ್ರ ಹಾಗೂ ಅವರ ದೂರವಾಣಿ ಸಂಖ್ಯೆಯನ್ನು ಅಳವಡಿಸಲು ಚರ್ಚಿಸಲಾಯಿತು.

ನ್ಯಾಯಬೆಲೆ ಅಂಗಡಿಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೂ ತರೆದು ಪಡಿತರ ವಿತರಿಸಲು ಸೂಚಿಸಲಾಗಿದ್ದು ತಪ್ಪಿದ್ದಲ್ಲಿ ಇಲಾಖೆಯ ಸಹಾಯವಾಣಿ ಸಂಖ್ಯೆ 1967 ಸಹಾಯವಾಣಿಗೆ ಕರೆಮಾಡಿ ದೂರು ನೀಡಲು ಸೂಚಿಸಿದರು.

ಮುಂದಿನ ದಿನಗಳಲ್ಲಿ ಫಲಾನುಭವಿಗಳಿಗೆ ಕರ್ತವ್ಯ ಆಪ್ ನ‌ ಮಾದರಿಯಂತೆ ಸ್ವತಃ ಫಲಾನುಭವಿಗಳೇ ಮೊಬೈಲ್ ಮೂಲಕ ಇಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸುವುದು ಚರ್ಚೆಯಲ್ಲಿದೆ ಎಂದರು

ಬೆಂಗಳೂರು ನಗರದಲ್ಲಿನ ನ್ಯಾಯಬೆಲೆ ಅಂಗಡಿಗಳ ಹಾಗೂ ಅಧಿಕಾರಿಗಳ ಮೇಲೆ ಬಂದ ದೂರುಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.

ಯಾರೆಲ್ಲಾ ಉಪಸ್ಥಿತರಿದ್ದರು?

ಸಭೆಯಲ್ಲಿ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ,ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ,ಎಸ್ ಆರ್ ,ಪಾಟೀಲ್, ಪುಷ್ಪ ಅಮರನಾಥ್,ಮೆಹರೋಜ್ ಖಾನ್,ಕೃಷ್ಣಪ್ಪ, ರಮೇಶ್ ಕುಮಾರ್ ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ,ಸರ್ಕಾರದ ಕಾರ್ಯದರ್ಶಿ ಕನಗವಲ್ಲಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ನಿಗಮದ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:  ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ; ತಡವಾಗಿ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ: ಸಿಎಂ ಡಿ ಕೆ ಶಿವಕುಮಾರ್

Leave a Reply

Your email address will not be published. Required fields are marked *