TOP NEWS
Hardik Pandya to leave Mumbai Indians biggest trade with rajasthan royals

Hardik Pandya: ಮುಂಬೈ ಇಂಡಿಯನ್ಸ್ ತೊರೆಯಲಿದ್ದಾರಾ ಹಾರ್ದಿಕ್ ಪಾಂಡ್ಯ? ರಾಜಸ್ಥಾನ್ ರಾಯಲ್ಸ್ ಜೊತೆ ಟ್ರೇಡ್ ಡೀಲ್‌?

ಮುಂಬೈ: ಮತ್ತೊಂದು ಕಳಪೆ ಐಪಿಎಲ್ ಪ್ರದರ್ಶನದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ( Hardik Pandya) ಫ್ರಾಂಚೈಸಿಯಿಂದ ಹೊರನಡೆಯುವ ಮುನ್ಸೂಚನೆ ಸಿಕ್ಕಿದೆ. ಗುಜರಾತ್ ಟೈಟನ್ಸ್ ತಂಡದಿಂದ ಮುಂಬೈಗೆ ಮರಳಿ ತಂಡದ ನಾಯಕತ್ವ ವಹಿಸಿಕೊಂಡಿದ್ದ ಹಾರ್ದಿಕ್, ತಂಡದೊಳಗಿನ ಆಟಗಾರರ ನಡುವಿನ ಭಿನ್ನಾಭಿಪ್ರಾಯಗಳ ವದಂತಿಗಳ ಮಧ್ಯೆ ತಾವು ತಂಡದಿಂದ ಹೊರಹೋಗಲು ಬಯಸಿರುವುದಾಗಿ ಫ್ರಾಂಚೈಸಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯದ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಸೆಳೆದುಕೊಳ್ಳಲು ರಾಜಸ್ಥಾನ್ ರಾಯಲ್ಸ್ ತಂಡ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಮುಂಬೈ ಇಂಡಿಯನ್ಸ್ ಜೊತೆ…

Read More
RCB Star Venkatesh Iyer gives surprise to allu arjun son

RCB: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮನೆಗೆ ಆರ್‌ಸಿಬಿ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಭೇಟಿ: ವೈರಲ್ ಆದ ಅಪರೂಪದ ಕ್ಷಣಗಳು

ಹೈದರಾಬಾದ್: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಹೈದರಾಬಾದ್ ನಿವಾಸಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಹಠಾತ್ ಭೇಟಿ ನೀಡಿದ್ದಾರೆ. ಭಾರತದ ಖ್ಯಾತ ಕ್ರಿಕೆಟಿಗ ಮತ್ತು ಪ್ಯಾನ್ ಇಂಡಿಯಾ ನಟನ ನಡುವೆ ನಡೆದ ಈ ವಿಶೇಷ ಭೇಟಿಯು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಿನಿಮಾ ಹಾಗೂ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದೆ. ಇಬ್ಬರೂ ತಾರೆಯರು ಅತ್ಯಂತ ಆತ್ಮೀಯವಾಗಿ…

Read More
virat kohli shares about his panic attack and thanked rahul Dravid

Virat Kohli: ವಿರಾಟ್ ಕೊಹ್ಲಿ ಮಾನಸಿಕ ಹೋರಾಟದ ಕಹಿಸತ್ಯ ಬಹಿರಂಗ: ಕಠಿಣ ಸಮಯದಲ್ಲಿ ನೆರವಾದ ದ್ರಾವಿಡ್‌ಗೆ ‘ಕಿಂಗ್’ ಕೃತಜ್ಞತೆ

ಬೆಂಗಳೂರು: ಕ್ರಿಕೆಟ್ ಮೈದಾನದಲ್ಲಿ ಸದಾ ರಗಡ್ ಆಗಿ ಕಾಣಿಸುವ ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಕೂಡ ತಮ್ಮ ವೃತ್ತಿಜೀವನದಲ್ಲಿ ತೀವ್ರವಾದ ಮಾನಸಿಕ ಒತ್ತಡ ಮತ್ತು ಆತಂಕವನ್ನು ಎದುರಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಯಶಸ್ಸಿನ ಉತ್ತುಂಗದಲ್ಲಿರುವ ಕ್ರೀಡಾಪಟುಗಳು ಸದಾ ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂಬ ಸಾರ್ವಜನಿಕರ ನಂಬಿಕೆಯನ್ನು ಸುಳ್ಳು ಮಾಡಿರುವ ಕೊಹ್ಲಿ, ತಮ್ಮ ಕಷ್ಟದ ದಿನಗಳಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಟೀಮ್ ಇಂಡಿಯಾದ ಮಾಜಿ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ….

Read More
60 litres and counting Jwala Gutta’s postpartum journey by milk donation

Jwala Gutta: ಎದೆಹಾಲು ದಾನದ ಮೂಲಕ ಹೊಸ ಕ್ರಾಂತಿ; ನವಜಾತ ಶಿಶುಗಳ ಪಾಲಿಗೆ ಸಂಜೀವಿನಿಯಾದ ಜ್ವಾಲಾ ಗುಟ್ಟಾ!

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ (Jwala Gutta) ಅವರು ಮಾಡಿರುವ ಮಾನವೀಯ ಕಾರ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಹೆಣ್ಣು ಮಗುವಿನ ಜನನದ ನಂತರದ ಮೊದಲ ಒಂದು ವರ್ಷದಲ್ಲಿ ಜ್ವಾಲಾ ಅವರು ಸುಮಾರು 60 ಲೀಟರ್‌ಗಳಷ್ಟು ಎದೆಹಾಲನ್ನು ಹೈದರಾಬಾದ್ ಮತ್ತು ಚೆನ್ನೈನ ಸರ್ಕಾರಿ ಆಸ್ಪತ್ರೆಗಳಿಗೆ ದಾನ ಮಾಡುವ ಮೂಲಕ ನೂರಾರು ನವಜಾತ ಶಿಶುಗಳ ಜೀವ ಉಳಿಸಲು ನೆರವಾಗಿದ್ದಾರೆ. ಈ ಕುರಿತು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮನಸ್ಪರ್ಶಿಯಾದ ಪೋಸ್ಟ್ ಒಂದನ್ನು…

Read More
Viral news anshul kamboj finally meets his lookalike

Viral News: ತಮ್ಮಂತೆಯೇ ಇರುವ ಪೊಲೀಸ್ ಅಧಿಕಾರಿಯನ್ನು ಭೇಟಿಯಾದ ಸಿಎಸ್‌ಕೆ ಸ್ಟಾರ್ ಅನ್ಶುಲ್ ಕಾಂಬೋಜ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದ ಅನ್ಶುಲ್ ಕಾಂಬೋಜ್ ಅವರಂತೆಯೇ ಕಾಣುವ (Viral News) ಪೊಲೀಸ್ ಅಧಿಕಾರಿಯನ್ನು ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ (CSK) ವೇಗಿ ಭೇಟಿ ಮಾಡಿದ್ದಾರೆ. ಇಬ್ಬರು ಒಂದೇ ರೀತಿ ಕಾಣುವ ವ್ಯಕ್ತಿಗಳು ಮುಖಾಮುಖಿಯಾಗುವುದು ಅಪರೂಪದ ಸಂಗತಿಯಾಗಿದ್ದು, ಸಿಎಸ್‌ಕೆ ತಂಡವು ಈ ವಿಶೇಷ ಭೇಟಿಗೆ ವೇದಿಕೆ ಕಲ್ಪಿಸಿಕೊಟ್ಟಿತ್ತು. ನೆಟ್ಟಿಗರಲ್ಲಿ ಆಶ್ಚರ್ಯ ಹುಟ್ಟುಹಾಕಿದ್ದ ಹೋಲಿಕೆ ಸಿಎಂ ವಿಜಯ್ ಅವರ ಪದಗ್ರಹಣದ ವೇಳೆ ವೇದಿಕೆಯ ಬಳಿ ಭದ್ರತಾ ಕಾರ್ಯದಲ್ಲಿದ್ದ…

Read More
MS Dhoni made record in income tax

MS Dhoni: ತೆರಿಗೆ ಪಾವತಿಯಲ್ಲೂ ಧೋನಿ ‘ನಂಬರ್ 1’: ಜಾರ್ಖಂಡ್-ಬಿಹಾರದಲ್ಲಿ ಉದ್ಯಮಿಗಳನ್ನೇ ಹಿಂದಿಕ್ಕಿದ ಮಾಹಿ!

ರಾಂಚಿ: ಕ್ರಿಕೆಟ್ ಪಿಚ್‌ನಲ್ಲಿ ಅಬ್ಬರಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಈಗ ತೆರಿಗೆ ಪಾವತಿಯಲ್ಲೂ ಹೊಸ ದಾಖಲೆ ಬರೆದಿದ್ದಾರೆ. 2025-26ರ ಸಾಲಿನಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿಂದ ಅತಿ ಹೆಚ್ಚು ವೈಯಕ್ತಿಕ ಆದಾಯ ತೆರಿಗೆ (Income Tax) ಪಾವತಿಸಿದವರ ಪಟ್ಟಿಯಲ್ಲಿ ಧೋನಿ (MS Dhoni) ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಉದ್ಯಮಿಗಳನ್ನು ಮೀರಿಸಿದ ಕ್ರಿಕೆಟಿಗ: ಧೋನಿ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ವಾಣಿಜ್ಯ ಚಟುವಟಿಕೆಗಳು ಗಣನೀಯವಾಗಿ ಬೆಳೆದಿವೆ. ಕೃಷಿ, ಹೋಟೆಲ್ ಮತ್ತು ಇತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅವರು, ಜಾರ್ಖಂಡ್ ಮತ್ತು ಬಿಹಾರದ…

Read More
Indian athletes running away from doping test

Doping Test: ಡೋಪಿಂಗ್ ಸುಳಿಯಲ್ಲಿ ಭಾರತೀಯ ಕ್ರೀಡಾಲೋಕ: ಒಲಿಂಪಿಕ್ ಆತಿಥ್ಯದ ಕನಸಿಗೆ ಎದುರಾಗಿದೆಯೇ ಹಿನ್ನಡೆ?

ನ್ಯೂಯಾರ್ಕ್: ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಡೋಪಿಂಗ್ (Doping Test) ಹಗರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಒಲಿಂಪಿಕ್ ಗೇಮ್ಸ್‌ನ ಉದ್ದೀಪನ ಮದ್ದು ತಡೆ ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂತರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ITA), ಭಾರತದಲ್ಲಿ ಕ್ರೀಡಾಪಟುಗಳು ಡೋಪಿಂಗ್ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪರೀಕ್ಷೆಯಿಂದ ಓಡಿಹೋಗುತ್ತಿರುವ ಕ್ರೀಡಾಪಟುಗಳು: ಐಟಿಎ ಮಹಾನಿರ್ದೇಶಕ ಬೆಂಜಮಿನ್ ಕೋಹೆನ್ ಅವರು ‘ದಿ ಅಥ್ಲೆಟಿಕ್’ ಪತ್ರಿಕೆಗೆ ನೀಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಉದ್ದೀಪನ ಮದ್ದು ತಡೆ ನಿಯಂತ್ರಣಾಧಿಕಾರಿಗಳು…

Read More