TOP NEWS

Bollywood: ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಅಮೃತಾ ಫಡ್ನವಿಸ್? ವೈರಲ್‌ ಆಯ್ತು ವಿಡಿಯೋ

acyress shreeleela humiliated by amruta Fadnavis in yoga function Bollywood

ಮುಂಬೈ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀಲೀಲಾ (Bollywood) ಅವರ ಎರಡು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅವರ ಜೊತೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಭಾಗವಹಿಸಿದ್ದರು. ಯೋಗಾಸನಗಳನ್ನು ಮಾಡುವಾಗ ಶ್ರೀಲೀಲಾ ಅವರ ಹಾವಭಾವಗಳ ಒಂದು ವಿಡಿಯೋ ಟ್ರೋಲ್ ಆಗುತ್ತಿದ್ದರೆ, ಮತ್ತೊಂದೆಡೆ ಛಾಯಾಗ್ರಾಹಕರ ಮುಂದೆ ನಡೆದ ಘಟನೆಯ ವಿಡಿಯೋ ನೋಡಿ ಅಭಿಮಾನಿಗಳು ಹಾಗೂ ನೆಟ್ಟಿಗರು ಶ್ರೀಲೀಲಾ ಪರವಾಗಿ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದಾರೆ.

ಏನಿದು ಘಟನೆ?

ಯೋಗಾಸನಗಳ ಕಾರ್ಯಕ್ರಮ ಮುಗಿದ ಬಳಿಕ ಮಾಧ್ಯಮಗಳಿಗಾಗಿ ಫೋಟೋ ಶೂಟ್ ಆಯೋಜಿಸಲಾಗಿತ್ತು. ಈ ವೇಳೆ ಮೊದಲು ಅಮೃತಾ ಫಡ್ನವಿಸ್, ಅವರ ಮಗಳು ಹಾಗೂ ಶ್ರೀಲೀಲಾ ಮೂವರೂ ಒಟ್ಟಿಗೆ ನಿಂತು ಕ್ಯಾಮೆರಾಗಳಿಗೆ ಫೋಸ್ ನೀಡಿದ್ದರು. ಆದರೆ ಆ ಜಂಟಿ ಫೋಟೋ ಮುಗಿಯುತ್ತಿದ್ದಂತೆ, ಅಮೃತಾ ಫಡ್ನವಿಸ್ ಅವರು ಶ್ರೀಲೀಲಾ ಅವರ ಬಳಿ ಪಕ್ಕಕ್ಕೆ ಸರಿಯುವಂತೆ ಗಂಭೀರವಾಗಿ ಹೇಳಿದ್ದಾರೆ. ಇದರಿಂದಾಗಿ ಶ್ರೀಲೀಲಾ ಅವರು ತಕ್ಷಣವೇ ಆ ಜಾಗದಿಂದ ಹೊರನಡೆದಿದ್ದು, ಆ ಬಳಿಕ ಅಮೃತಾ ತಮ್ಮ ಮಗಳ ಜೊತೆ ಮಾತ್ರ ಫೋಟೋ ತೆಗೆಸಿಕೊಂಡಿದ್ದಾರೆ. ಈ ದೃಶ್ಯ ಹರಿದಾಡುತ್ತಿದ್ದಂತೆ ಶ್ರೀಲೀಲಾ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರರಂಗದ ಉನ್ನತ ನಟಿಯರಲ್ಲಿ ಒಬ್ಬರಾದ ನಮ್ಮ ಹೆಮ್ಮೆಯ ನಟಿಗೆ ಸಾರ್ವಜನಿಕವಾಗಿ ಇಂತಹ ಅವಮಾನ ಮಾಡಿರುವುದು ಸರಿಯಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಮೃತಾ ಅವರಿಗೆ ಅಧಿಕಾರದ ಅಹಂಕಾರ ತಲೆಗೇರಿದೆ ಎಂದು ಅನೇಕರು ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಆದರೆ ಈ ವಿವಾದಕ್ಕೆ ಸಂಬಂಧಿಸಿದಂತೆ ಮಗದೊಂದು ವಾದವೂ ಕೇಳಿಬರುತ್ತಿದೆ. ಮಾಧ್ಯಮಗಳ ಛಾಯಾಗ್ರಾಹಕರೇ ಅಮೃತಾ ಮತ್ತು ಅವರ ಮಗಳ ಪ್ರತ್ಯೇಕ ಫೋಟೋಗಳನ್ನು ಕೇಳಿದ್ದರಿಂದ, ಶ್ರೀಲೀಲಾ ಅವರಿಗೆ ಕೊಂಚ ಪಕ್ಕಕ್ಕೆ ಸರಿಯುವಂತೆ ಅಮೃತಾ ಅವರು ವಿನಂತಿಸಿಕೊಂಡಿದ್ದರೇ ವಿನಃ ಅದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ಇಷ್ಟೊಂದು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ಹೀಗೆ ಏನೇ ವಾದ-ವಿವಾದಗಳು ನಡೆದರೂ, ವಿಡಿಯೋದಲ್ಲಿ ಶ್ರೀಲೀಲಾ ಅವರ ಮುಖ ಸಣ್ಣದಾಗಿರುವುದು ಮತ್ತು ಅವರು ಬೇಸರದಿಂದಲೇ ಅಲ್ಲಿಂದ ಹೊರನಡೆದಂತೆ ಕಾಣುತ್ತಿರುವುದು ನಿಜ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಈ ಹಿಂದೆ ಹಾಸ್ಯ ನಟ ಮಹೇಶ್ ಅವರ ವಿಷಯದಲ್ಲೂ ಇಂತಹದ್ದೇ ಒಂದು ವಿವಾದ ಉಂಟಾದಾಗ ಶ್ರೀಲೀಲಾ ಅವರು ಸ್ಪಷ್ಟನೆ ನೀಡಿ ಪ್ರತಿಕ್ರಿಯಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಈ ಹೊಸ ವಿಡಿಯೋ ವಿವಾದದ ಕುರಿತು ಶ್ರೀಲೀಲಾ ಅವರು ಮುಂದಿನ ದಿನಗಳಲ್ಲಿ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯಶ್ ನಟನೆಗೆ ಕಾಜಲ್ ಅಗರ್ವಾಲ್ ಜೈಕಾರ, ಮಂಡೋದರಿ ಪಾತ್ರದ ಶೂಟಿಂಗ್ ಅಪ್‌ಡೇಟ್!

Leave a Reply

Your email address will not be published. Required fields are marked *