TOP NEWS

HD Kumaraswamy: ಡಿಕೆಶಿ ಕುಟುಂಬದ ವಿರುದ್ಧ ಹೆಚ್‌ಡಿಕೆ ಬಿಗ್ ಆಡಿಯೋ ಬಾಂಬ್: ಸಿದ್ಧಗಂಗಾ ಮಠದ ಆಸ್ತಿ, ನೈಸ್ ಭೂಕಬಳಿಕೆ ಆರೋಪ!

HD Kumaraswamy Releases Audio Tapes Alleging DK Shivakumar Disrespected Siddaganga Mutt Seer Over Land Dispute

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕುಟುಂಬದ ವಿರುದ್ಧ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತೊಮ್ಮೆ ಗಂಭೀರ ಮಾದರಿಯ ಭೂಕಬಳಿಕೆ ಆರೋಪಗಳನ್ನು ಮಾಡಿ ಭಾರಿ ರಾಜಕೀಯ ಸಂಚಲನ ಮೂಡಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದವರು ನಡೆಸಿರುವ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಮತ್ತು ಧ್ವನಿ ಸುರುಳಿಯನ್ನು (Audio Clip) ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. 2003ರಲ್ಲಿ ಕೇವಲ 4 ಕೋಟಿ ರೂಪಾಯಿ ಇದ್ದ ಡಿಕೆ ಶಿವಕುಮಾರ್ ಅವರ ಆಸ್ತಿ ಮೌಲ್ಯ, 2023ರ ವೇಳೆಗೆ ಭರ್ಜರಿ 1,413 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಡಿಪಿ (ODP) ನಿಯಮಗಳಲ್ಲಿ ತಮಗೆ ಬೇಕಾದಂತೆ ಬದಲಾವಣೆ ಮಾಡಿಕೊಂಡಿರುವುದೇ ಈ ಆಸ್ತಿ ಗಳಿಕೆಗೆ ಮುಖ್ಯ ಕಾರಣ ಎಂದು ಕುಮಾರಸ್ವಾಮಿ ಸುದೀರ್ಘ ದಾಖಲೆಗಳನ್ನು ಪ್ರದರ್ಶಿಸಿ ದೂರಿದ್ದಾರೆ.

ಸರ್ಕಾರಿ ಹಾಗೂ ಮಠದ ಜಮೀನು ಅಕ್ರಮ ಹಸ್ತಾಂತರ ಆರೋಪ: ನೈಸ್ (NICE) ಯೋಜನೆ ವ್ಯಾಪ್ತಿಗೆ ಬರುವ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಡಿಕೆ ಶಿವಕುಮಾರ್ ಕುಟುಂಬದ ಹೆಸರಿಗೆ ಬರೆಸಿಕೊಳ್ಳಲಾಗಿದೆ ಎಂದು ಹೆಚ್‌ಡಿಕೆ ಗಂಭೀರವಾಗಿ ಆರೋಪಿಸಿದ್ದಾರೆ. “1997ರಲ್ಲೇ ಸರ್ಕಾರಿ ಯೋಜನೆಗೆ ನೋಟಿಫೈ ಆಗಿದ್ದ ಸುಮಾರು 10 ಎಕರೆ ಜಮೀನನ್ನು 2004ರ ನವೆಂಬರ್ 3ರಂದು ಡಿಕೆ ಸುರೇಶ್ ಅವರು ಖರೀದಿ ಮಾಡಿದ್ದಾರೆ. ಇದೇ ಜಮೀನನ್ನು 2026ರಲ್ಲಿ ಡಿಕೆ ಶಿವಕುಮಾರ್ ಅವರ ಪುತ್ರಿ ಆಭರಣ ಹೆಸರಿಗೆ ವರ್ಗಾಯಿಸಲಾಗಿದೆ. ಕೆಐಎಡಿಬಿ (KIADB) ಈಗಾಗಲೇ ಭೂಸ್ವಾಧೀನ ಮಾಡಿಕೊಂಡಿದ್ದ ಜಮೀನನ್ನು ಸಹ ನಿಯಮಬಾಹಿರವಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳಿಗೆ ಬೆದರಿಕೆ ಹಾಕಿ ಸುಮಾರು 150 ರಿಂದ 200 ಎಕರೆಗೂ ಅಧಿಕ ಗೋಮಾಳದ ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ನಾನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೇನೆ ಎಂದು ಆರೋಪಿಸುವ ಡಿಕೆಶಿ ಅವರು, ಈ ಅಕ್ರಮ ಭೂ ಖರೀದಿಗೆ ಮೊದಲು ಉತ್ತರ ನೀಡಲಿ” ಎಂದು ಕುಮಾರಸ್ವಾಮಿ ನೇರ ಸವಾಲು ಎಸೆದಿದ್ದಾರೆ.

ಸಿದ್ಧಗಂಗಾ ಮಠದ ಶ್ರೀಗಳಿಗೂ ಅವಮಾನಿಸಿದ ಆಡಿಯೋ ಬಿಡುಗಡೆ: ಇದಲ್ಲದೆ ಬಿಎಂಐಸಿ (BMIC) ಯೋಜನೆಗೆಂದು ಪವಿತ್ರ ಸಿದ್ಧಗಂಗಾ ಮಠಕ್ಕೆ ಸೇರಿದ 7 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 1 ಎಕರೆ ಮಾತ್ರ ರಸ್ತೆಗೆ ಬಳಕೆಯಾಗಿದ್ದು, ಉಳಿದ 6 ಎಕರೆ ಭೂಮಿಯನ್ನು ಮರಳಿ ನೀಡುವಂತೆ ಮಠದ ಶ್ರೀಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈ ವಿಚಾರವಾಗಿ ಮಾತನಾಡಿದ್ದ ಡಿಕೆ ಶಿವಕುಮಾರ್, “ಈ ಭೂಮಿ ವಿಚಾರಕ್ಕೆ ನನ್ನ ಮನೆಗೆ ಬರಬೇಡಿ, ಕೇವಲ ಆಶೀರ್ವಾದ ಮಾಡಲು ಮಾತ್ರ ಬನ್ನಿ” ಎಂದು ಸ್ವಾಮೀಜಿಯವರಿಗೆ ಉದ್ಧಟತನದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ, ಅದಕ್ಕೆ ಸಂಬಂಧಿಸಿದ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ಬಾಂಬ್ ರಾಜ್ಯ ರಾಜಕಾರಣದಲ್ಲಿ ಭಾರಿ ಕಾವು ಪಡೆದುಕೊಂಡಿದೆ.

ಇದನ್ನೂ ಓದಿ: ಡಿಪಿಎಆರ್‌ನಲ್ಲಿ 444 ಕೋಟಿ ರೂ. ಟೆಂಡರ್ ಅಕ್ರಮ ಆರೋಪ: ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು!

Leave a Reply

Your email address will not be published. Required fields are marked *