TOP NEWS

Toxic: ಯಶ್ ‘ಟಾಕ್ಸಿಕ್’ ಸಿನಿಮಾದ ನಟಿಯರ ಸಂಭಾವನೆ ಎಷ್ಟು ಗೊತ್ತಾ? ರಾಯನಿಗೆ ಸಿಕ್ಕಿದ್ದೆಷ್ಟು?

Yashs Toxic Remuneration Leaked How Much Are Yash Kiara, and Nayanthara Getting Paid

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಅತ್ಯಂತ ನಿರೀಕ್ಷಿತ ‘ಟಾಕ್ಸಿಕ್: (Toxic) ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, రుಕ್ಮಿಣಿ ವಸಂತ್, ಹುಮಾ ಕುರೇಷಿ ಮತ್ತು ತಾರಾ ಸುತಾರಿಯಾ ಸೇರಿದಂತೆ ಬೃಹತ್ ತಾರಾಗಣವೇ ಇದೆ. ಇದರ ಬೆನ್ನಲ್ಲೇ ಈ ಚಿತ್ರದ ಪ್ರಮುಖ ಕಲಾವಿದರು ಪಡೆದಿರುವ ಭಾರಿ ಸಂಭಾವನೆಯ ಕುರಿತು ಗಾಂಧಿನಗರ ಹಾಗೂ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆಗಳು ಆರಂಭವಾಗಿವೆ.

ಬರೋಬ್ಬರಿ 50 ಕೋಟಿ ಸಂಭಾವನೆ ಪಡೆದ್ರಾ ಯಶ್?

ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕ ನಟ ಯಶ್ ಅತಿ ಹೆಚ್ಚು ಅಂದರೆ ಸುಮಾರು 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಯಾಶ್ ಕೇವಲ ‘ರಾಯ’ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಮಾತ್ರವಲ್ಲದೆ, ಗೀತು ಮೋಹನ್‌ದಾಸ್ ಅವರೊಂದಿಗೆ ಚಿತ್ರಕಥೆ ಬರೆಯುವುದರಲ್ಲಿ ಮತ್ತು ನಿರ್ಮಾಣ ಕಾರ್ಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಚಿತ್ರದ ನಟಿಯರ ವಿಚಾರಕ್ಕೆ ಬಂದರೆ, ‘ನಾಡಿಯಾ’ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಯಾರಾ ಅಡ್ವಾಣಿ ಅವರಿಗೆ ಸುಮಾರು 15 ಕೋಟಿ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿದೆ. ವಿಶೇಷವೆಂದರೆ ಇದು ಭಾರತೀಯ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಸಂಭಾವನೆಗಿಂತ ಹೆಚ್ಚು ಎನ್ನಲಾಗುತ್ತಿದೆ. ಇನ್ನು ‘ಗಂಗಾ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಗನ್ ಹಿಡಿದು ಕಾಣಿಸಿಕೊಂಡಿರುವ ನಯನತಾರಾ ಅವರಿಗೆ 12 ರಿಂದ 18 ಕೋಟಿ ರೂಪಾಯಿ ನಡುವೆ ಸಂಭಾವನೆ ಸಿಕ್ಕಿದೆ ಎನ್ನಲಾಗಿದೆ.‌

ಕನ್ನಡದ ರುಕ್ಕು ಸಂಭಾವನೆ ಎಷ್ಟು?

‘ಮೆಲಿಸಾ’ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೆಜ್ಜೆ ಇಡುತ್ತಿರುವ ಕನ್ನಡದ ಕನ್ನಡಿ ರೇಷ್ಮೆ ರುಕ್ಮಿಣಿ ವಸಂತ್ ಅವರಿಗೆ 3 ರಿಂದ 5 ಕೋಟಿ ರೂಪಾಯಿ ನೀಡಿರುವ ಮಾಹಿತಿ ಇದೆ. ಗ್ಯಾಂಗ್‌ಸ್ಟರ್ ಸಾಮ್ರಾಜ್ಯದ ‘ಎಲಿಜಬೆತ್’ ಪಾತ್ರಧಾರಿಯಾಗಿರುವ ಹುಮಾ ಕುರೇಷಿ ಹಾಗೂ ‘ರೆಬೆಕಾ’ ಪಾತ್ರ ಮಾಡುತ್ತಿರುವ ತಾರಾ ಸುತಾರಿಯಾ ತಲಾ 2 ರಿಂದ 3 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂಭಾವನೆಯ ಅಂಕಿ-ಅಂಶಗಳನ್ನು ಚಿತ್ರತಂಡ ಅಧಿಕೃತವಾಗಿ ಎಲ್ಲೂ ದೃಢಪಡಿಸಿಲ್ಲ.

ಇದನ್ನೂ ಓದಿ:  ‘ಟಾಕ್ಸಿಕ್’ ಟ್ರೇಲರ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ದ್ವಿಪಾತ್ರದ ಧಮಾಕಾ: ಅಪ್ಪ-ಮಗನಾಗಿ ಅಬ್ಬರಿಸಿದ ಮಾನ್‌ಸ್ಟರ್, ಫ್ಯಾನ್ಸ್ ಫಿದಾ!

Leave a Reply

Your email address will not be published. Required fields are marked *