Rukmini Vasanth: ‘ಟಾಕ್ಸಿಕ್’ ಅಬ್ಬರದ ನಡುವೆಯೇ ಮಲಯಾಳಂಗೆ ಹಾರಿದ ರುಕ್ಮಿಣಿ: ನಿವಿನ್ ಪೌಲಿ ಜೊತೆ ಹೊಸ ಸಿನಿಮಾದ ಚಿತ್ರೀಕರಣ ಶುರು
ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಸಿನಿಮಾ ಜರ್ನಿ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಜಿಗಿಯುತ್ತಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ‘ಕಾಂತಾರ’ ಚಿತ್ರಗಳ ಮೂಲಕ ಸೌತ್ ಸಿನಿಮಾರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ನಟಿ, ಈಗ ಮಲಯಾಳಂ ಚಿತ್ರರಂಗಕ್ಕೂ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದಾರೆ. ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ಜೊತೆಗಿನ ತಮ್ಮ ಹೊಸ ಸಿನಿಮಾದ ಶೂಟಿಂಗ್ ಅನ್ನು ಅವರು ಅಧಿಕೃತವಾಗಿ ಆರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಶೇರ್ ಮಾಡಿಕೊಂಡ…
