TOP NEWS

Fitness: 76ರ ಹರೆಯದಲ್ಲೂ ಶಿಸ್ತಿನ ಫಿಟ್‌ನೆಸ್: ರಾಕೇಶ್ ರೋಷನ್ ಆರೋಗ್ಯದ ಸೀಕ್ರೆಟ್ ಇಲ್ಲಿದೆ!

Bollywood director rakesh roshan fitness secrets revealed

ಮುಂಬೈ: ಬಾಲಿವುಡ್‌ನ ಹಿರಿಯ ನಿರ್ದೇಶಕ ಮತ್ತು ನಟ ರಾಕೇಶ್ ರೋಷನ್ ಅವರಿಗೆ ಈಗ 76 ವರ್ಷ ವಯಸ್ಸು. ಆದರೂ ಅವರ ಫಿಟ್‌ನೆಸ್ ಹಾಗೂ ದೇಹದಾರ್ಢ್ಯ(Fitness) ಯುವಕರಿಗೂ ಸವಾಲು ಹಾಕುವಂತಿದೆ. ಈ ಇಳಿವಯಸ್ಸಿನಲ್ಲೂ ತಾವು ಇಷ್ಟೊಂದು ಸಕ್ರಿಯವಾಗಿ ಮತ್ತು ಆರೋಗ್ಯವಾಗಿರಲು ಕಾರಣವೇನು ಎಂಬುದನ್ನು ಅವರು ಇತ್ತೀಚೆಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ. ದಶಕಗಳಿಂದ ತಾವು ಪಾಲಿಸಿಕೊಂಡು ಬಂದಿರುವ ಕಟ್ಟುನಿಟ್ಟಿನ ಜೀವನಶೈಲಿಯೇ ತಮ್ಮ ಈ ಆಕ್ಟೀವ್ ಜೀವನಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯ
ತಮ್ಮ ಮಗಳು ಸುನೈನಾ ರೋಷನ್ ಅವರ ಇನ್‌ಸ್ಟಾಗ್ರಾಮ್ ಪುಟದಲ್ಲಿ ನಡೆದ ಸಂಭಾಷಣೆಯಲ್ಲಿ ಮಾತನಾಡಿದ ರಾಕೇಶ್ ರೋಷನ್, ವಯಸ್ಸಾಗುತ್ತಿದ್ದಂತೆ ದೇಹವನ್ನು ದಂಡಿಸುವುದು ಮತ್ತು ಶಿಸ್ತು ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದಿದ್ದಾರೆ. “ಸಾಮಾನ್ಯವಾಗಿ 65 ಅಥವಾ 70 ವರ್ಷ ದಾಟುತ್ತಿದ್ದಂತೆ ಹಲವರ ಹೆಗಲುಗಳು ಬಾಗಿ, ಹೊಟ್ಟೆ ಮುಂಭಾಗಕ್ಕೆ ಬರುವುದನ್ನು ನಾನು ನೋಡಿದ್ದೇನೆ. ಆದರೆ ವಯಸ್ಸಾದಂತೆ ನಾವು ನಮ್ಮ ದೇಹಕ್ಕೆ ಇನ್ನು ಕೊಂಚ ಹೆಚ್ಚು ತರಬೇತಿ ನೀಡಬೇಕು. ಆಗ ಮಾತ್ರ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಾಧ್ಯ” ಎಂಬುದು ಅವರ ಅಭಿಪ್ರಾಯ.


ಇನ್ನು ರಾಕೇಶ್ ರೋಷನ್ ಅವರ ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ನಿತ್ಯದ ಜಿಮ್ ಮತ್ತು ವೈಟ್ ಟ್ರೈನಿಂಗ್ ಅಭ್ಯಾಸವನ್ನು ಮಗಳು ಸುನೈನಾ ಮುಕ್ತಕಂಠದಿಂದ ಮೆಚ್ಚಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ರಾಕೇಶ್, ಫಿಟ್‌ನೆಸ್‌ ವಿಷಯದಲ್ಲಿ ವ್ಯಾಯಾಮಕ್ಕಿಂತ ನಾವು ಸೇವಿಸುವ ಆಹಾರವೇ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.

ಶೇಕಡಾ 90 ರಷ್ಟು ಕೊಡುಗೆ ನಮ್ಮದಿರಬೇಕು

“ದೇಹವನ್ನು ಫಿಟ್ ಆಗಿಡಲು ವ್ಯಾಯಾಮದ ಪಾತ್ರ ಶೇಕಡಾ 10 ಮಾತ್ರ. ಉಳಿದ ಶೇಕಡಾ 90 ರಷ್ಟು ಕೊಡುಗೆ ನೀಡೋದು ನಾವು ತಿನ್ನುವ ಆಹಾರ. ಕಳೆದ ಮೂರು ವರ್ಷಗಳಿಂದ ನಾನು ನನ್ನ ಆಹಾರ ಪದ್ಧತಿಯಲ್ಲಿ ವಿಶೇಷ ಗಮನ ಹರಿಸುತ್ತಿದ್ದೇನೆ ಮತ್ತು ಇದು ನನ್ನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದೆ. ಈಗ ನನಗೆ ಸಕ್ಕತ್ ನಿದ್ದೆ ಬರುತ್ತದೆ, ಬೆಳಿಗ್ಗೆ ಎದ್ದ ತಕ್ಷಣ ನಿರಾಯಾಸವಾಗಿ ಹೊಸ ಉತ್ಸಾಹ ಸಿಗುತ್ತದೆ. ಈಗಿಡೀ ದಿನಚರಿಯೇ ಬದಲಾಗಿಹೋಗಿದೆ” ಎಂದು ತಮ್ಮ ಆರೋಗ್ಯದ ರಹಸ್ಯವನ್ನು ರಾಕೇಶ್ ರೋಷನ್ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಬೊಜ್ಜು ಇಳಿಸುವ ಔಷಧಿಗಳ ಆಯ್ಕೆಗೆ ಹೊಸ ದಾರಿ: ಯಾರಿಗೆ ಯಾವ ಚಿಕಿತ್ಸೆ ಸೂಕ್ತ ಎಂದು ತಿಳಿಸಲಿದೆ ಈ ರಕ್ತ ಪರೀಕ್ಷೆ!

Leave a Reply

Your email address will not be published. Required fields are marked *