Home Remedies: ವಿಪರೀತ ತಲೆನೋವು ಅಂತ ಮಾತ್ರೆ ತಗೋಬೇಡಿ, ಈ ಪರಿಹಾರ ಮಾಡಿ ಸಾಕು

home remedies for headache in winter

ಸಾಮಾನ್ಯವಾಗಿ,  ತಲೆನೋವು ಕಾಣಿಸಿಕೊಂಡಾಗ ಅನೇಕ ಬಾರಿ ಅದನ್ನ ನೆಗ್ಲೆಕ್ಟ್‌ ಮಾಡಲಾಗುತ್ತದೆ. ಆದರೆ ಅದು ಜಾಸ್ತಿ ಆದಾಗ ಅದಕ್ಕೆ ಮಾತ್ರೆಗಳನ್ನ ತೆಗೆದುಕೊಳ್ಳಲಾಗುತ್ತದೆ. ಅದರ ಬದಲು ತಲೆನೋವಿಗೆ ಕಾರಣವಾಗುವ ಕೆಲವೊಂದು ಅಂಶಗಳನ್ನ ಗಮನಿಸಿ, ಅದರಲ್ಲಿ ಬದಲಾವಣೆ ಮಾಡಿಕೊಂಡರೆ ಯಾವುದೇ ಮಾತ್ರೆಗಳನ್ನ ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಈ ಔಷಧಿಗಳು ತಕ್ಷಣದ ಪರಿಹಾರವನ್ನು ನೀಡಬಹುದಾದರೂ, ಅವು ಹೆಚ್ಚಾಗಿ ಅಡ್ಡಪರಿಣಾಮಗಳಿಂದ ಇನ್ನೊಂದು ಸಮಸ್ಯೆಯನ್ನ ತರುತ್ತದೆ. ಹಾಗಾಗಿ ಸರಳವಾಗಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಹಾಗಾದ್ರೆ ಮನೆಯಲ್ಲಿ ತಲೆನೋವಿಗೆ (Home Remedies) ಯಾವುದೇ ಅಡ್ಡ ಪರಿಣಾಮ ಇಲ್ಲದೇ ಪರಿಹಾರ ಪಡೆಯುವುದು ಹೇಗೆ ಎನ್ನುವುದು ಇಲ್ಲಿದೆ,

ಚೆನ್ನಾಗಿ ನೀರು ಕುಡಿಯಿರಿ

ತಲೆನೋವಿಗೆ ನಿರ್ಜಲೀಕರಣವು ಮುಖ್ಯವಾದ ಕಾರಣವಾಗಿದೆ. ನೀರಿನ ಕೊರತೆಯು ಮೆದುಳಿಗೆ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುತ್ತದೆ, ಇದು ನೋವು ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಪ್ರತಿದಿನ 2.5–3 ಲೀಟರ್ ನೀರು ಕುಡಿಯಿರಿ. ಎಳನೀರು, ನಿಂಬೆ ಪಾನಕ ಅಥವಾ ಮಜ್ಜಿಗೆಯಂತಹ ಎಲೆಕ್ಟ್ರೋಲೈಟ್-ಭರಿತ ಪಾನೀಯಗಳನ್ನ ಸೇವಿಸಿ.

ಅದರ ಜೊತೆಗೆ ಬಿಸಿಯಾದ ಅಥವಾ ಹವಾನಿಯಂತ್ರಿತ ಕೋಣೆಯಿಂದ ತಂಪಾದ ರೂಮ್‌ಗೆ ತಕ್ಷಣವೇ ಹೋಗುವುದು ಸಹ ತಲೆನೋವಿಗೆ ಕಾರಣವಾಗುತ್ತದೆ. ಮುಖ್ಯವಾಗಿ ಮೈಗ್ರೇನ್‌ಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು, ತಾಪಮಾನವನ್ನ ನೋಡಿಕೊಂಡು ಹೋಗುವುದು ಉತ್ತಮ. ಸ್ವಲ್ಪ ಸಮಯದವರೆಗೆ ಸಾಮಾನ್ಯ ತಾಪಮಾನದಲ್ಲಿ ಇರಿ ಮತ್ತು ನಿಮ್ಮ ದೇಹವು ಒಗ್ಗಿಕೊಳ್ಳಲು ಬಿಡಿ. ವಿಭಿನ್ನ ತಾಪಮಾನವಿರುವ ಜಾಗಕ್ಕೆ ಹೋಗುವ ಸ್ವಲ್ಪ ಸಮಯ ತೆಗೆದುಕೊಳ್ಳಿ. ಅಲ್ಲದೆ, ನೀವು ಮಧ್ಯಾಹ್ನ ಬಿಸಿಲಿನಿಂದ ಅಥವಾ ತುಂಬಾ ಚಳಿ ಇರುವ ಕಡೆಯಿಂದ ಮನೆಗೆ ಬಂದರೆ, ತಕ್ಷಣ ತಣ್ಣೀರು ಅಥವಾ ಬಿಸಿ ನರು ಕುಡಿಯಬೇಡಿ.

ಆಹಾರದ ಬಗ್ಗೆ ಗಮನವಿರಲಿ

ನಮ್ಮ ಆಹಾರ ಅನೇಕ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ನಾವು ಅದನ್ನ ಆಯ್ಕೆ ಮಾಡಿಕೊಳ್ಳಬೇಕು. ಸೀಸನ್‌ ಅನುಸಾರ ಹಣ್ಣುಗಳನ್ನ ಸೇವನೆ ಮಾಡಿ ಹಾಗೂ ಹೆಚ್ಚು ಹಸಿರು ತರಕಾರಿಗಳನ್ನ ಸೇವಿಸಿ. ಆಹಾರ ಪದ್ಧತಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮ ಬೀರುವುದರಿಂದ ತಲೆನೋವು ಉಂಟಾಗುವುದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಿ. ಅತಿಯಾದ ಕೆಫೀನ್ ಮತ್ತು ಸಕ್ಕರೆ ಸೇವನೆಯನ್ನು ತಪ್ಪಿಸಿ.

ಇದನ್ನೂ ಓದಿ: ಸಂಜೆ ಸ್ನ್ಯಾಕ್ಸ್‌ ಗುಜರಾತಿ ಸ್ಪೆಷಲ್‌ ಖಾಮನ್‌ ಢೋಕ್ಲಾ ಮಾಡಿ ಸವಿಯಿರಿ

Leave a Reply

Your email address will not be published. Required fields are marked *