ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಕಣದಲ್ಲಿ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಭರ್ಜರಿ ಮುನ್ನಡೆ ಸಾಧಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಸರಳ ಬಹುಮತಕ್ಕೆ ಬೇಕಾದ 118 ಸ್ಥಾನಗಳತ್ತ ವಿಜಯ್ ಪಡೆ ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿರುವುದು ಈಗ ತಮಿಳುನಾಡಿನಲ್ಲಿ ದೊಡ್ಡ ಸುದ್ದಿಯಾಗಿದೆ.
ವೈರಲ್ ಆಯ್ತು ತ್ರಿಶಾ ಅವರ ‘ಸಿಎಂ’ ಕನಸಿನ ವಿಡಿಯೋ! ಒಂದೆಡೆ ವಿಜಯ್ ಅಧಿಕಾರದ ಗದ್ದುಗೆಯ ಸನಿಹಕ್ಕೆ ಬರುತ್ತಿದ್ದರೆ, ಮತ್ತೊಂದೆಡೆ ತ್ರಿಶಾ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. 2004ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ತ್ರಿಶಾ, “ನನಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಹಂಬಲವಿದೆ. ಕಾದು ನೋಡಿ, ಮುಂದಿನ ಹತ್ತು ವರ್ಷಗಳಲ್ಲಿ ನಾನು ಸಿಎಂ ಆಗುತ್ತೇನೆ” ಎಂದು ಭವಿಷ್ಯ ನುಡಿದಿದ್ದರು. ಒಂದು ವೇಳೆ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, “ಮೊದಲು ನನ್ನನ್ನು ಆರಿಸಿ ತನ್ನಿ, ಆಮೇಲೆ ಕಾರ್ಯವೈಖರಿ ನೋಡಿ” ಎಂದು ಚಮತ್ಕಾರಿಯಾಗಿ ಉತ್ತರಿಸಿದ್ದರು. ಅಂದು ಅವರು ಆಡಿದ್ದ ಮಾತುಗಳು ಈಗಿನ ರಾಜಕೀಯ ಸಂದರ್ಭದಲ್ಲಿ ಮತ್ತೆ ಸದ್ದು ಮಾಡುತ್ತಿವೆ.
Remembered the scene from Pushpa 2
— Vineeth K (@DealsDhamaka) May 4, 2026
CM changed for his wife … if rumours are true, could be a perfect match ✍🏾✍🏾✍🏾
Btw, Trisha Bday is May 4th as well#TamilNadu pic.twitter.com/V6aL2AjqE5
ವಿಜಯ್ ನಿವಾಸದಲ್ಲಿ ಸಂಭ್ರಮ; ವದಂತಿಗಳಿಗೆ ಸಿಕ್ಕಿತೇ ರೆಕ್ಕೆ? ಟಿವಿಕೆ ಪಕ್ಷದ ಅಭೂತಪೂರ್ವ ಯಶಸ್ಸನ್ನು ಸಂಭ್ರಮಿಸಲು ತ್ರಿಶಾ ಅವರು ನೇರವಾಗಿ ವಿಜಯ್ ಅವರ ಮನೆಗೆ ಭೇಟಿ ನೀಡಿರುವುದು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ. ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ತ್ರಿಶಾ ನಡುವಿನ ಸ್ನೇಹದ ಬಗ್ಗೆ ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. ವಿಶೇಷವೆಂದರೆ, ವಿಜಯ್ ಪತ್ನಿ ಸಂಗೀತ ಅವರು ಸಲ್ಲಿಸಿದ್ದಾರೆ ಎನ್ನಲಾದ ವಿಚ್ಛೇದನ ಅರ್ಜಿಯಲ್ಲಿ, “ವಿಜಯ್ ಅವರು ಚಿತ್ರರಂಗದ ನಟಿಯೊಬ್ಬರ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ” ಎಂದು ಉಲ್ಲೇಖಿಸಿರುವುದು ಈ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದೆ.
ಸದ್ಯದ ಚುನಾವಣಾ ಟ್ರೆಂಡ್ ಪ್ರಕಾರ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತವಾಗಿದ್ದು, ತ್ರಿಶಾ ಅವರ ಭೇಟಿಯು ರಾಜಕೀಯ ಮತ್ತು ಚಿತ್ರರಂಗದ ವಲಯದಲ್ಲಿ ಹೊಸ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
