ರಾಮನವಮಿ ಹಬ್ಬಕ್ಕೆ ಬಹಳ ವಿಶೇಷವಾದ ಮಹತ್ವ ಇದೆ. ಜ್ಯೋತಿಷ್ಯದ ಪ್ರಕಾರ ಸಹ ಈ ದಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲ ಗ್ರಹಗಳ ಸಂಚಾರದ ಕಾರಣದಿಂದ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಹೌದು, ರಾಮನವಮಿ ದಿನ (Rama Navami) ಚಂದ್ರ ಮತ್ತು ಗುರುವಿನ ಕಾರಣದಿಂದ ಗಜಕೇಸರಿ ಯೋಗ (Gajakesari Yoga) ರೂಪುಗೊಳ್ಳುತ್ತದೆ. ಆ ಯೋಗದಿಂದ ಯಾರಿಗೆಲ್ಲಾ ಲಾಭ ಸಿಗಲಿದೆ ಎಂಬುದು ಇಲ್ಲಿದೆ.
ವೃಷಭ ರಾಶಿ: ಈ ಗುರು ಸಂಚಾರವು ಮೇಷ ರಾಶಿಯವರಿಗೆ ಅನೇಕ ವೃತ್ತಿಪರ ಪ್ರಯೋಜನಗಳನ್ನು ತರುತ್ತದೆ. ಕಳೆದ ವರ್ಷದಿಂದ ನೀವು ಕಚೇರಿಯಲ್ಲಿ ಎದುರಿಸುತ್ತಿದ್ದ ಒತ್ತಡ ಕಡಿಮೆಯಾಗುತ್ತದೆ ಮತ್ತು ಬಡ್ತಿ ಅಥವಾ ವೇತನ ಹೆಚ್ಚಳ ಪಡೆಯುವ ಹೆಚ್ಚಿನ ಅವಕಾಶವಿರುತ್ತದೆ. ಉದ್ಯಮಿಗಳು ಹೊಸ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಲಾಭ ಗಳಿಸುತ್ತಾರೆ. ವಿಶೇಷವಾಗಿ ವರ್ಷಗಳಿಂದ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಯುವಕರಿಗೆ ಉತ್ತಮ ಉದ್ಯೋಗ ಸಿಗುವ ಅವಕಾಶವಿದೆ
ಸಿಂಹ ರಾಶಿ: ಈ ರಾಶಿಯವರು ಸಾಧಿಸಿದ್ದೆಲ್ಲವೂ ಚಿನ್ನ ಎಂದು ಹೇಳಬಹುದು. ವರ್ಷಗಳಿಂದ ನಿಮ್ಮನ್ನು ಕಾಡುತ್ತಿದ್ದ ಆರ್ಥಿಕ ಸಮಸ್ಯೆಗಳು ಕ್ರಮೇಣ ಮಾಯವಾಗುತ್ತವೆ ಮತ್ತು ನಿಮ್ಮ ಕೈಯಲ್ಲಿ ಸಾಕಷ್ಟು ಹಣ ಸಿಗುತ್ತದೆ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ ಹರಡುತ್ತದೆ. ಅಲ್ಲದೆ, ಬಹಳ ದಿನಗಳಿಂದ ಮುಂದೂಡಲಾಗುತ್ತಿದ್ದ ಮದುವೆಯಂತಹ ಶುಭ ಕಾರ್ಯಕ್ರಮಗಳು ಈಗ ಪೂರ್ಣಗೊಳ್ಳುತ್ತವೆ.
ವೃಶ್ಚಿಕ ರಾಶಿ: ಈ ಯೋಗದ ಕಾರಣದಿಂದ ನಿಮ್ಮ ಮಾತುಗಳು ಸಮಾಜದಲ್ಲಿ ಪ್ರಸಿದ್ಧವಾಗುತ್ತವೆ. ಗುರುವಿನ ಕೃಪೆಯಿಂದಾಗಿ ಇದ್ದಕ್ಕಿದ್ದಂತೆ ಹಣ ಸಿಗುವ ಸೂಚನೆಗಳಿವೆ. ನೀವು ಹಿಂದೆ ನೀಡಿದ್ದ ಸಾಲಗಳು ಅಥವಾ ಹಳೆಯ ಬಾಕಿಗಳು ಈಗ ಮರುಪಡೆಯಲ್ಪಡುತ್ತವೆ. ಯಾರಾದರೂ ನ್ಯಾಯಾಲಯದ ಪ್ರಕರಣಗಳು ಅಥವಾ ಆಸ್ತಿ ವಿವಾದಗಳಲ್ಲಿ ಭಾಗಿಯಾಗಿದ್ದರೆ, ತೀರ್ಪುಗಳು ನಿಮ್ಮ ಪರವಾಗಿ ಬರುವ ಸಾಧ್ಯತೆಯಿದೆ
ಧನಸ್ಸು ರಾಶಿ: ನಿಮ್ಮ ಮಾನಸಿಕ ಆರೋಗ್ಯವು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ ಮತ್ತು ನೀವು ಶಾಂತಿಯನ್ನು ಕಾಣುವಿರಿ. ಈಗ ನೀವು ನಿಮ್ಮ ಅಂತಃಪ್ರಜ್ಞೆಯನ್ನು ಬಳಸಬಹುದು ಮತ್ತು ನಿಮ್ಮ ಮನಸ್ಸಿನಲ್ಲಿ ಒಳ್ಳೆಯದೆಂದು ಭಾವಿಸುವದನ್ನು ಮಾಡಬಹುದು. ಅದು ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಗ್ರಹಗಳ ಸ್ಥಾನ ಪಲ್ಲಟ, 3 ರಾಶಿಯವರ ಕೆಟ್ಟ ಕಾಲ ಸ್ಟಾರ್ಟ್
