LPG: ಭಾರತಕ್ಕೆ ಬರಲಿದೆ ಎಲ್‌ಪಿಜಿಯ ಎರಡು ಹಡಗುಗಳು

LPG ship will be reach mangaluru soon says central government

ನವದೆಹಲಿ: 92 ಸಾವಿರದ 600 ಮೆಟ್ರಿಕ್ ಟನ್ ಎಲ್‌ಪಿಜಿ (LPG) ಹೊತ್ತ ಎರಡು ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತಕ್ಕೆ ಆಗಮಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

27 ರಂದು ನವಮಂಗಳೂರು ಬಂದರಿಗೆ ಬರಲಿದೆ ಹಡಗು

 ಯುನೈಟೆಟ್ ಅರಬ್ ಎಮಿರೇಟ್ಸ್‌ನ ರುವೈಸ್‌ನಿಂದ 45 ಸಾವಿರ ಮೆಟ್ರಿಕ್ ಎಲ್‌ಪಿಜಿ ಹೊತ್ತ ಫೈನ್‌ಗ್ಯಾಸ್ ಹಡಗು ಇದೇ 27 ರಂದು ನವಮಂಗಳೂರು ಬಂದರಿಗೆ ಆಗಮಿಸಲಿದೆ ಎಂದು ಬಂದರುಗಳು, ಹಡಗು ಸಾಗಾಣೆ ಮತ್ತು ಜಲಮಾರ್ಗಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ. ಜಗ್‌ವಸಂತ್ ಹಡಗು ಇದೇ 26 ರಂದು ಗುಜರಾತ್ ಕಾಂಡ್ಲಾ ಬಂದರಿಗೆ ಆಗಮಿಸಲಿದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಸಂಘರ್ಷ, ಶಾಂತಿ ಸ್ಥಾಪನೆ ಬಗ್ಗೆ ಮೋದಿ ಮಾತು

Leave a Reply

Your email address will not be published. Required fields are marked *