ತಮಿಳುನಾಡು: ನೆರೆಯ ತಮಿಳುನಾಡು (Tamilnadu) ವಿಧಾನಸಭಾ ಚುನಾವಣೆಗೆ ಮಾರ್ಚ್ 31ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ – ಎಐಎಡಿಎಂಕೆ (AIADMK) ಮತ್ತು ಎನ್ ಡಿಎ (NDA) ಮಿತ್ರಕೂಟದ ನಡುವೆ ಸೀಟು ಹಂಚಿಕೆ ಅಂತಿಮಗೊಂಡಿದೆ.
ಬಿಜೆಪಿ 27 ಸ್ಥಾನಗಳಲ್ಲಿ
ಚೆನ್ನೈನಲ್ಲಿ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಇ. ಪಳನಿಸಾಮಿ ಮತ್ತು ಮಿತ್ರ ಪಕ್ಷಗಳ ನಾಯಕರೊಂದಿಗೆ ನಡೆದ ಸಭೆಯಲ್ಲಿ, ಸೀಟು ಹಂಚಿಕೆಯನ್ನು ಅಂತಿಮಗೊಳಿಸಲಾಗಿದೆ. ಎಐಎಡಿಎಂಕೆ 178 ಸ್ಥಾನಗಳಲ್ಲಿ ಬಿಜೆಪಿ 27 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
ಕಾಂಗ್ರೆಸ್ ಪಕ್ಷದೊಂದಿಗೆ ಡಿಎಂಕೆ ಮೈತ್ರಿ
ಡಾ. ಅನ್ಬುಮಣಿ ನೇತೃತ್ವದ – ಪಿಎಂಕೆ (PMK) ಗೆ 18 ಸ್ಥಾನಗಳನ್ನು ಮತ್ತು ಟಿಟಿವಿ ದಿನಕರನ್ ಅವರ ನೇತೃತ್ವದ – ಎಎಂಎಂಕೆ (AMMK) ಗೆ 11 ಸ್ಥಾನಗಳನ್ನು ಬಿಟ್ಟು ಕೊಡಲಾಗಿದೆ. ಆಡಳಿತಾರೂಢ ಡಿಎಂಕೆ ಈಗಾಗಲೇ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅದು 28 ಸೀಟುಗಳನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ.
