ನವದೆಹಲಿ: ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು 2026ರ ಪರಿಗಣನೆ ಹಾಗೂ ಅಂಗೀಕಾರಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡಿಸಿದ್ದಾರೆ.
ಆರ್ಥಿಕ ಬೆಳವಣಿಗೆ ಆದ್ಯತೆ
ಈ ಮಸೂದೆ 2026-27ರ ಹಣಕಾಸು ವರ್ಷಕ್ಕೆ ಕೇಂದ್ರ ಸಕಾರದ ಹಣಕಾಸು ಪ್ರಸ್ತಾವನೆಗಳನ್ನು ಜಾರಿಗೆ ತರಲು ಉದ್ದೇಶಿಸಿದೆ.ಈ ವೇಳೆ ನಿರ್ಮಲಾ ಸೀತಾರಾಮನ್ , ವಿಧೇಯಕ, 2026-27ನೇ ಸಾಲಿನ ಸರ್ಕಾರದ ವಿತ್ತೀಯ ಯೋಜನೆಗಳನ್ನು ಒಳಗೊಂಡಿದ್ದು, ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂಎಲ್ಲರನ್ನೊಳಗೊಂಡ ಅಭಿವೃದ್ಧಿಯ ಪ್ರಮುಖ ಪ್ರಸ್ತಾವನೆಗಳಿಗೆ ಆದ್ಯತೆ ನೀಡಿದೆ ಎಂದರು.
ಬಳಿಕ ಕಾಂಗ್ರೆಸ್ ಸದಸ್ಯ ಡಾ. ಅಮರ್ ಸಿಂಗ್, ಚರ್ಚೆ ಆರಂಭಿಸಿದರು. ವಿಧೇಯಕದ ಮೇಲೆ ಹಲವು ಪಕ್ಷಗಳ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಕೇಂದ್ರದ ಅನೇಕ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗಿದೆ.
