Male Mahadeshwara: ವಿಜೃಂಭಣೆಯಿಂದ ನಡೆದ ಮಲೆ ಮಹದೇಶ್ವರ ರಥೋತ್ಸವ

Male Mahadeshwara rathotsava ended

ಚಾಮರಾಜನಗರ:  ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ (Male Mahadeshwara) ಬೆಟ್ಟದಲ್ಲಿ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು. ಕಳೆದ ನಾಲ್ಕು ದಿನಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ರಥೋತ್ಸವದ ಮೂಲಕ ತೆರೆಬಿದ್ದಿತು.

ಜಿಲ್ಲಾಡಳಿತದಿಂದ ಅದ್ಭುತ ವ್ಯವಸ್ಥೆ

 ರಾಜ್ಯ ಹಾಗೂ ತಮಿಳುನಾಡು ಭಾಗದಿಂದ ಬಂದಿದ್ದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ, ದಾಸೋಹ ವ್ಯವಸ್ಥೆಯನ್ನು ಜಿಲ್ಲಾಡಳಿತ ವ್ಯವಸ್ಥಿತವಾಗಿ ಮಾಡಿತ್ತು. ಯುಗಾದಿ ಹಬ್ಬದ ದಿನದಂದು ಚಾಮರಾಜನಗರ ಜಿಲ್ಲೆಯ ಹಲವೆಡೆ ರೈತರು ಹೊನ್ನೇರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದರು. ಎತ್ತುಗಳು, ಎತ್ತಿನಬಂಡಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಂವತ್ಸರದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ಸಮೃದ್ಧ ಮಳೆ- ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ: ಮಾರ್ಚ್ 23 ರಿಂದ ಮೇಲುಕೋಟೆ ವೈರಮುಡಿ ಉತ್ಸವ

Leave a Reply

Your email address will not be published. Required fields are marked *