T20 World Cup: ಎರಡನೇ ಬಾರಿ ಗೆದ್ದು ಬೀಗಿದ ಭಾರತ, ಟೀ20 ವಿಶ್ವಕಪ್‌ ನೀಲಿ ತಂಡದ ಮಡಿಲಿಗೆ

T20 World Cup India erupts in celebration after win

ಗುಜರಾತ್‌: ಕೋಟ್ಯಾಂತರ ಅಭಿಮಾನಿಗಳ ಕನಸು ಕೊನೆಗೂ ನನಸಾಗಿದ್ದು, ಈ ವರ್ಷ ಮತ್ತೆ ಭಾರತ ತಂಡ ಟೀ20 ವಿಶ್ವಕಪ್‌ (T20 World Cup) ಗೆದ್ದು ಬೀಗಿದೆ. ಈ ಗೆಲುವನ್ನ ಇಡೀ ದೇಶವನ್ನ ಸಂಭ್ರಮಿಸುತ್ತಿದ್ದು, ಎಲ್ಲೆಡೆ ಸಂತೋಷ ಮನೆ ಮಾಡಿದೆ.

96 ರನ್‌ಗಳಿಂದ ಗೆದ್ದು ಬೀಗಿದ ಭಾರತ

ಭಾನುವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸಿ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇನ್ನು ಈ ವರ್ಷದ ಟೂರ್ನಿಯಲ್ಲಿ ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ಈ ಗೆಲುವಿನ ನಂತರ, ತಂಡದ ಜೆರ್ಸಿಯನ್ನು ಧರಿಸಿ ಅಭಿಮಾನಿಗಳು ದೇಶದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಸಂಭ್ರಮ ಆಚರಣೆ ಮಾಡಿದ್ದಾರೆ. ಅಭಿಮಾನಿಗಳು ಡ್ರಮ್ ಬಾರಿಸುತ್ತಾ, ಧ್ವಜಗಳನ್ನು ಬೀಸುತ್ತಾ ಮತ್ತು ತಡರಾತ್ರಿಯವರೆಗೆ ಪಟಾಕಿಗಳನ್ನು ಸಿಡಿಸುತ್ತಾರೆ ಸಂಭ್ರಮಿಸಿದ್ದಾರೆ.

ಸತತ 2 ಗೆಲುವು ಸಾಧಿಸಿದ ಭಾರತ

ಭಾನುವಾರ ಭಾರತ ಸತತ 2 ಐಸಿಸಿ ಪುರುಷರ ಟಿ20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಗಿದ್ದು. 2024 ರಲ್ಲಿ, ಭಾರತ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿತು.

ಕಳೆದ ವಾರ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟೂರ್ನಮೆಂಟ್ ಫೈನಲ್‌ಗೆ ಅರ್ಹತೆ ಪಡೆದರೆ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಇಲ್ಲಿಯವರೆಗೆ, ಭಾರತೀಯ ಪುರುಷರ ತಂಡವು ಎರಡು ಬಾರಿ (1983 ಮತ್ತು 2011) ಏಕದಿನ ವಿಶ್ವಕಪ್ ಮತ್ತು ಮೂರು ಬಾರಿ (2007, 2024 ಮತ್ತು 2026) ಟಿ20 ವಿಶ್ವಕಪ್ ಗೆದ್ದಿದೆ.

ಇದನ್ನೂ ಓದಿ: ಐಟಿಎಫ್ ಡಬ್ಲ್ಯು-35 ಮಹಿಳಾ ಟೆನಿಸ್ ಟೂರ್ನಿ ಫೈನಲ್‌ನಲ್ಲಿ ಗೆದ್ದ ವೈಷ್ಣವಿ-ಅಂಕಿತಾ

Leave a Reply

Your email address will not be published. Required fields are marked *